ದೇಶ

ರೊಹಿಂಗ್ಯಾ ವಿಚಾರ ಕುರಿತು ಭಾರತದ ಬಗ್ಗೆ ತಪ್ಪು ಮಾಹಿತಿ ಬೇಡ: ಕಿರಣ ರಿಜಿಜು

Srinivasamurthy VN
ನವದೆಹಲಿ: ಮಾನವಹಕ್ಕು ಸಂಘಟನೆಗಳು ರೊಹಿಂಗ್ಯಾ ಮುಸ್ಲಿಮರ ಕುರಿತಂತೆ ಭಾರತದ ಬಗ್ಗೆ ತಪ್ಪು ಮಾಹಿತಿ ಹರಡುವುದು ಬೇಡ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಸೋಮವಾರ ಹೇಳಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, "ರೊಹಿಂಗ್ಯಾ ಮುಸ್ಲಿಮರ ವಿಚಾರ ತೀರ ಸೂಕ್ಷ್ಮವಾಗಿದ್ದು. ಈ ಬಗ್ಗೆ ಭಾರತ ತನ್ನದೇ ಆದ ನಿಲುವನ್ನು ಹೊಂದಿದೆ. ಮಾನವ ಹಕ್ಕು ಸಂಘಟನೆಗಳು ಈ ವಿಚಾರವಾಗಿ ಭಾರತದ ವಿರುದ್ಧ ಯಾವುದೇ ರೀತಿಯ ತಪ್ಪು ಮಾಹಿತಿ ಹರಡದಂತೆ ಮನವಿ ಮಾಡುತ್ತಿದ್ದೇನೆ. ದೇಶದ ಭದ್ರತೆಯಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಭದ್ರತೆಯೇ ನಮ್ಮ ಪ್ರಮುಖ ಆಧ್ಯತೆಯಾಗಿದ್ದು, ದೇಶದ ಪ್ರಜೆಗಳ ರಕ್ಷಣೆಯೇ ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಇದೇ ವೇಳೆ ರೊಹಿಂಗ್ಯನ್ನರ ಕುರಿತ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಇದನ್ನೇ ನಾವು ಸುಪ್ರೀಂಕೋರ್ಟ್ ನಲ್ಲೂ ಅಫಿಡವಿಟ್ ಸಲ್ಲಿಸಿ ಹೇಳಲಿದ್ದೇವೆ. ಸರ್ಕಾರದ ಯಾವುದೇ ನಿರ್ಧಾರಗಳು ದೇಶದ ಹಿತಾಸಕ್ತಿಯ ಮೇಲೆ ಆಧಾರಿತವಾಗಿರುತ್ತದೆ ಎಂದು ರಿಜಿಜು ಹೇಳಿದ್ದಾರೆ.

SCROLL FOR NEXT