ಹೈದರಾಬಾದ್: ಮದುವೆಯನ್ನೇ ಒಂದು ದಂಧೆ ಮಾಡಿಕೊಂಡಿದ್ದ ಆರೋಪದ ಮೇಲೆ ಎಂಟು ಶೇಖ್ ಗಳನ್ನು ಹಾಗೂ ನಾಲ್ವರು ಮುಸ್ಲಿಂ ಮೌಲ್ವಿಗಳನ್ನು ಹೈದರಾಬಾದ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಶೇಖ್ ಗಳು ಸೌದಿ ಅರೇಬಿಯಾ, ಒಮನ್ ಹಾಗೂ ಖತಾರ್ ಮೂಲದವರಾಗಿದ್ದು, ಮದುವೆ ಹೆಸರಿನಲ್ಲಿ ಮುಗ್ದ ಯುವತಿಯರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಮೌಲ್ವಿಗಳನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಸೌದಿ ಅರೇಬಿಯಾದ ಶೇಖ್ ಗಳು ಗುತ್ತಿಗೆ ಆಧಾರದ ಮೇಲೆ ಇಬ್ಬರು ಅಪ್ರಾಪ್ತ ಬಾಲಕಿಯರಾದ ಫಲಖ್ನುಮ್ ಮತ್ತು ಚಂದ್ರಯಾನ್ ಗುಟ್ಚಾರನ್ನು ಮದುವೆಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಲಾಡ್ಜ್ ಮಾಲೀಕರನ್ನು ಹಾಗೂ ಐವರು ಮದುವೆ ಬ್ರೋಕರ್ ಗಳನ್ನು ಸಹ ಬಂಧಿಸಿದ್ದಾರೆ.