ಸಿಬಿಐ ಬಲೆಗೆ ಬಿದ್ದ ಒಡಿಶಾ ಹೈ ಕೋರ್ಟ್ ನಿವೃತ್ತ ನ್ಯಾಯಾಧೀಶ
ನವದೆಹಲಿ:: ಭ್ರಷ್ಠಾಚಾರ ಪ್ರಕರಣಕ್ಕೆ ಸಂಬಂಧಿಸಿ ಒಡಿಶಾದ ಹೈ ಕೋರ್ಟ್ ನಿವೃತ್ತ ನ್ಯಾಯಾಧೀಶ ಸೇರಿ ಐವರನ್ನು ಸಿಬಿಐ ಪೋಲೀಸರು ಬಂಧಿಸಿದ್ದಾರೆ.
ಒಡಿಶಾ ಹೈ ಕೋರ್ಟ್ ನಿವೃತ್ತ ನ್ಯಾಯಾಧೀಶ ಇಶ್ರತ್ ಮಸ್ಸೂರ್ ಕುಡ್ಡುಸಿ ರನ್ನು ಸಿಬಿಐ ಬಂಧಿಸಿದೆ.
ಗ್ರೇಟರ್ ಕೈಲಾಶ್ ನಲ್ಲಿ ಇರುವ ನಿವೃಅತ್ತ ನ್ಯಾಯಾಧೀಶ ಖುಡ್ಡುಷಿ ನಿವಾಸ ಸೇರಿದಂತೆ ಎಂಟು ಸ್ಥಳಗಳಲ್ಲಿ ವಿವರವಾದ ಶೋಧ ಕಾರ್ಯಾಚರಣೆಯ ನಂತರ ನಿನ್ನೆ ತಡರಾತ್ರಿ ಇವರನ್ನು ಬಂಧಿಸಲಾಗಿದೆ. ಸಿಬಿಐ ಅಧಿಕಾರಿಗಳು ಭುವನೇಶ್ವರ್ ಮತ್ತು ಲಖ್ನೋ ದಲ್ಲಿ ಸಹ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಮಧ್ಯವರ್ತಿ ಮತ್ತು ಹವಾಲಾ ಆಯೋಜಕ ರಾಮ್ ದೇವ್ ಸಾರಸ್ವತ್ ಲಕ್ನೋದಲ್ಲಿ ವೈದ್ಯಕೀಯ ಕಾಲೇಜು ನಡೆಸುತ್ತಿರುವ ಪ್ರಸಾದ್ ಎಜುಕೇಶನ್ ಟ್ರಸ್ಟ್, ನ ಬಿ ಪಿ ಯಾದವ್ ಮತ್ತು ಪಲಾಶ್ ಯಾದವ್ ಮತ್ತು ಬಿಸ್ವನಾಥ್ ಅಗರ್ ವಾಲ್ ಇವರುಗಳು ಪ್ರಕರಣದಲ್ಲಿ ಬಂಧಿತರಾದ ಇನ್ನಿತರೆ ಆರೋಪಿಗಳು ಎಂದು ಸಿಬಿಐ ಮೂಲಗಳು ತಿಳಿಸಿದೆ.
ಬಂಧಿತ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics