ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸ್ವದೇಶಕ್ಕೆ ಮರಳಲು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸುತ್ತಿದ್ದಾನೆ ಎಂದು ರಾಜ್ ಠಾಕ್ರೆ ಬಾಂಬ್ ಸಿಡಿಸಿದ್ದಾರೆ.
ದಾವೂದ್ ಇಬ್ರಾಹಿಂ ಬಹಳ ಅನಾರೋಗ್ಯ ಮತ್ತು ದುರ್ಬಲಗೊಂಡಿದ್ದು ಇದರಿಂದಾಗಿ ಕೊನೆ ದಿನಗಳನ್ನು ಭಾರತದಲ್ಲಿ ಕಳೆಯಬೇಕೆಂದು ಇಚ್ಛಿಸಿದ್ದು ಈ ಸಂಬಂಧ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಿದ್ದಾನೆ ಎಂದು ಮಹಾರಾಷ್ಟ್ರ ರಾಜಕೀಯ ಮುಖಂಡ ರಾಜ್ ಠಾಕ್ರೆ ಆರೋಪಿಸಿದ್ದಾರೆ.
ಸ್ವದೇಶಕ್ಕೆ ದಾವೂದ್ ಇಬ್ರಾಹಿಂ ಮರಳಲು ತೀರ್ಮಾನಿಸಿದ್ದಾರೆ ಆದರೆ ಕೇಂದ್ರ ಸರ್ಕಾರ ಮಾತ್ರ ಆತನನ್ನು ಮರಳಿ ಭಾರತಕ್ಕೆ ಕರೆಸಿದ ಕ್ರೆಡಿಟ್ ಪಡೆದುಕೊಳ್ಳಲು ಮುಂದಾಗಿದೆ ಎಂದು ರಾಜ್ ಠಾಕ್ರೆ ಆರೋಪಿಸಿದ್ದಾರೆ.
ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಭೂಗತ ಪಾತಕಿಯು ಭಾರತಕ್ಕೆ ಮರಳಲು ಅವಕಾಶ ಕಲ್ಪಿಸಲಿದೆ ಎಂದು ರಾಜ್ ಠಾಕ್ರೆ ಊಹಿಸಿದ್ದಾರೆ.
1993ರಲ್ಲಿ ಮುಂಬೈ ನಡೆದಿದ್ದ ಸರಣಿ ಸ್ಫೋಟದಲ್ಲಿ ಅಂಕಿ ಅಂಶಗಳ ಪ್ರಕಾರ 257 ಮಂದಿ ಮೃತಪಟ್ಟಿದ್ದರು. ಇನ್ನು ದಾಳಿಯಲ್ಲಿ ಸಾವಿರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ದಾವೂದ್ ಇಬ್ರಾಂಹಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದರು. ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎಂದು ಭಾರತ ಸಾಕ್ಷ್ಯ ಒದಗಿಸಿತ್ತು. ಇನ್ನು ವಿಶ್ವಸಂಸ್ಥೆ ಸಹ ಪುಷ್ಠಿಕರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics