ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ನವರಾತ್ರಿ ಸಂಭ್ರಮ ಗುರುವಾರದಿಂದ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ.
ದುರ್ಗಾ ಮಾತೆಯ ವಿವಿಧ ಅವತಾರಗಳನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಗುವ ನವರಾತ್ರಿ ಇಂದಿನಿಂದ ಆರಂಭಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿಯವರು ಟ್ವೀಟ್ ಮಾಡುವ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ಹೇಳಿದ್ದಾರೆ.
ಪವಿತ್ರ ನವರಾತ್ರಿ ಆರಂಭದ ಹಿನ್ನಲೆಯಲ್ಲಿ ದೇಶದ ಪ್ರತಿಯೊಬ್ಬರಿಗೂ ಶುಭಾಶಯಗಳು ಎಂದಿದ್ದಾರೆ. ಅಲ್ಲದೆ, ನವರಾತ್ರಿಯ ಮೊದನ ದಿನ ನಾವು ಶೈಲಪುತ್ರಿಯನ್ನು ಆರಂಧನೆ ಮಾಡುತ್ತೇವೆ ಎಂದಿರುವ ಅವರು, ಶೈಲಪುತ್ರಿಗೆ ಸಂಬಂಧಿಸಿದ ಸ್ತುತಿಯೊಂದನ್ನು ಹಂಚಿಕೊಂಡಿದ್ದಾರೆ.
ನವರಾತ್ರಿ ಉತ್ಸವ 9 ದಿನಗಳ ಕಾಲ ನಡೆಯದಿದ್ದು, ದುರ್ಗೆಯ 9 ಅವತಾರಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics