ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಇ-ಫೈಲಿಂಗ್ ಪೋರ್ಟಲ್ ನಲ್ಲಿನ ಮಾಹಿತಿ ನವೀಕರಣಕ್ಕೆ ತೆರಿಗೆ ಇಲಾಖೆ ಮನವಿ

ತೆರಿಗೆ ಇಲಾಖೆಯು ಆದಾಯ ತೆರಿಗೆ ಇಲಾಖೆಯು ಐಟಿ ಆರ್ ಸಲ್ಲಿಸಿದ, ಇತರ ಐ-ಟಿ ವ್ಯವಹಾರಗಳನ್ನು ಆನ್ ಲೈನ್ ನಲ್ಲಿ ನಡೆಸುವ ತನ್ನ ತೆರಿಗೆದಾರರಿಗೆ.......

ತೆರಿಗೆ ಇಲಾಖೆ
Raghavendra Adiga
Updated On : 22 Sept 2017, 5:53 am
ನವದೆಹಲಿ: ತೆರಿಗೆ ಇಲಾಖೆಯು  ಆದಾಯ ತೆರಿಗೆ ಇಲಾಖೆಯು ಐಟಿ ಆರ್ ಸಲ್ಲಿಸಿದ, ಇತರ ಐ-ಟಿ ವ್ಯವಹಾರಗಳನ್ನು ಆನ್ ಲೈನ್ ನಲ್ಲಿ ನಡೆಸುವ ತನ್ನ ತೆರಿಗೆದಾರರಿಗೆ, ಅಧಿಕೃತ ಇ-ಫೈಲಿಂಗ್ ಪೋರ್ಟಲ್ ನಲ್ಲಿ ತಮ್ಮ ಪ್ರೊಫೈಲ್ ಮತ್ತು ಇತರೆ ಪ್ರಮುಖ ವಿವರಗಳನ್ನು ನವೀಕರಿಸಲು ಕೇಳಿದೆ.
ಖಾಸಗಿ ಮತ್ತು ಸೆಕೆಂದರಿ ಇಮೇಲ್ ಮತ್ತು ಮೊಬೈಲ್ ಫೋನ್ ಸಂಖ್ಯೆಗಳು, ವಿಳಾಸ ಮತ್ತು ಬ್ಯಾಂಕ್ ಖಾತೆ ವಿವರಗಳಂತಹ ತಮ್ಮ ಇತ್ತೀಚಿನ ಮಾಹಿತಿಯನ್ನು ಒದಗಿಸುವಂತೆ ತೆರಿಗೆದಾರರಿಗೆ ಇಲಾಖೆ ಕೇಳಿಕೊಂಡಿದೆ. ಇದರಿಂದ ತೆರಿಗೆ ಇಲಾಖೆ ಮತ್ತು ತೆರಿಗೆದಾರರ ನಡುವೆ ದ್ವಿಪಕ್ಷೀಯ ಸಂಬಂಧ ಉತ್ತಮವಾಗುತ್ತದೆ ಎಂದು ತನ್ನ ಮನವಿಯಲ್ಲಿ ಉಲ್ಲೇಖಿಸಿದೆ.
ತೆರಿಗೆದಾರರು ಇಮೇಲ್ ಮೂಲಕ ಮತ್ತು ಎಸ್ ಎಂಎಸ್ ಮೂಲಕ ಒಂದು ಟೈಮ್ ಪಾಸ್ ವರ್ಡ್ (ಓಟಿಪಿ) ಅನ್ನು ಕಳುಹಿಸಿದ ನಂತರ ಈ ವಿವರಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಪ್ರತಿಕ್ರಿಯೆ ನೀದಲಾಗುತ್ತದೆ.

Advertisement

Advertisement

"ತೆರಿಗೆದಾರರು ಮತ್ತು ಇಲಾಖೆಯ ನಡುವೆ ಪರಿಣಾಮಕಾರಿ ಸಂವಹನವನ್ನು ಸುಲಭಗೊಳಿಸಲು ಈ ಹೊಸ ನೋಂದಣಿ ಪ್ರಕ್ರಿಯೆ ಅಗತ್ಯವಾಗಿದೆ. ಪ್ರಸ್ತುತ ಇ-ಫೈಲಿಂಗ್ ಬಳಕೆದಾರರು ಇ-ಫೈಲಿಂಗ್ ಖಾತೆಗೆ ಲಾಗ್ ಇನ್ ಮಾಡುವ ಮೂಲಕ ತಮ್ಮ ಪ್ರೊಫೈಲ್ ಅನ್ನು ನವೀಕರಿಸುವುದು ಅಗತ್ಯವಿದೆ. ಈಗಾಗಲೇ ನೋಂದಾಯಿಸಲ್ಪಟ್ಟಿರುವ ಮತ್ತು ಸಕ್ರಿಯಗೊಳಿಸದ ಬಳಕೆದಾರರು ಈಗ ಪುನಃ ನೋಂದಾಯಿಸಬೇಕಾಗುತ್ತದೆ" ಎಂದು  ತೆರಿಗೆ ಇಲಾಖೆ ಸಲಹೆಗಾರರು ತಿಳಿಸಿದ್ದಾರೆ.
ತೆರಿಗೆದಾರರು ತಮ್ಮ ವೈಯಕ್ತಿಕ ಇ-ಫೈಲಿಂಗ್ ಖಾತೆಯನ್ನು https://incometaxindiaefiling.gov.in/ ನಲ್ಲಿ ಲಾಗ್ ಇನ್ ಆಗುವ ಮೂಲಕ ನವೀಕರಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments