ಜಮ್ಮು: ಕಾಶ್ಮೀರದ ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ಶಿಬಿರದ ಮೇಲೆ ಬುಧವಾರದಂದು ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಭಯೋತ್ಪಾದಕರ ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ಉಗ್ರರಾದ ಗಾಝೀಫರ್ ಮತ್ತು ಆರಿಫ್ ರನ್ನು ಬಂಧಿಸಲಾಗಿದೆ. ಮೂರನೇ ಭಯೋತ್ಪಾದಕನಿಗಾಗಿ ಹುಡುಕಾಟ ನಡೆದಿದೆ. ಉಗ್ರರಿಂದ ಎರಡು ಆಯುಧಗಳನ್ನು ಸಹ ಪಡೆದುಕೊಳ್ಳಲಾಗಿದೆ" ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಬುಧವಾರ ಸಂಜೆ, ಬನ್ನಿಹಾಲ್ ನ ಜವಾಹರ್ ಸುರಂಗದ ಬಳಿ ಉಗ್ರಗಾಮಿಗಳು ಸಶಸ್ತ್ರ ಸೀಮಾ ಬಲ ಶಿಬಿರದ ಮೇಲೆ ದಾಳಿ ಮಾಡಿದ್ದರು.