ಸಾಂದರ್ಭಿಕ ಚಿತ್ರ 
ದೇಶ

ಬೇನಾಮಿ ಆಸ್ತಿ: ವಿವರ ನೀಡುವ ರಹಸ್ಯ ಮಾಹಿತಿದಾರರಿಗೆ 1 ಕೋಟಿ ರು ಬಹುಮಾನ!

ಬೇನಾಮಿ ಆಸ್ತಿ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುವ ರಹಸ್ಯ ಮಾಹಿತಿದಾರರಿಗೆ ಒಂದು ಕೋಟಿ ರು ಬಹುಮಾನ ನೀಡಲು ಕೇಂದ್ರ ಸರ್ಕಾರ ...

ನವದೆಹಲಿ: ಬೇನಾಮಿ ಆಸ್ತಿ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುವ ರಹಸ್ಯ ಮಾಹಿತಿದಾರರಿಗೆ ಒಂದು ಕೋಟಿ ರು ಬಹುಮಾನ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಯೋಜನೆ ಮುಂದಿನ ತಿಂಗಳಿನಿಂದ ಜಾರಿಗೆ ಬರುವ ಸಾಧ್ಯತೆಯಿದ್ದು, 15 ಲಕ್ಷದಿಂದ 1 ಕೋಟಿ ರು ವರೆಗೆ ಬಹಮಾನ ನೀಡಲಾಗುವುದು ಎಂದು ಕೇಂದ್ರ ತೆರಿಗೆ ನಿರ್ದೇಶನ ಮಂಡಳಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಹಿತಿದಾರ ನೀಡುವ ವಿವರ ಅಧಿಕೃತವಾಗಿರಬೇಕು ಹಾಗೂ ಮಾಹಿತಿದಾರನ ಗುರುತನ್ನು ರಹಸ್ಯವಾಗಿಡಲಾಗುವುದು, ಇಲಾಖೆಯೂ ಯಾವುದೇ ಕಾರಣಕ್ಕೂ ಮಾಹಿತಿದಾರನ ವಿವರವನ್ನು ಎಲ್ಲಿಯೂ ಬಹಿರಂಗಗೊಳಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಕಳೆದ ವರ್ಷ ಈ ಬೇನಾಮಿ ಆಸ್ತಿ ಕಾನೂನನ್ನು ಪರಿಚಯಿಸಲಾಗಿದ್ದು, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಆದಾಯ ಗುಪ್ತಚರ ಇಲಾಖೆಗಳಿಂದ ಮಾಹಿತಿದಾರರಿಗೆ ಬಹುಮಾನ ನೀಡುವ ಪದ್ಧತಿ ಮೊದಲಿನಿಂದಲೂ ಇದೆ.
ಬೇನಾಮಿ ಆಸ್ತಿ ಹೊಂದಿರುವವರನ್ನು ಪತ್ತೆ ಹಚ್ಚುವುದು  ಆದಾಯ ತೆರಿಗೆ ಇಲಾಖೆ ಹಾಗೂ ಆಡಳಿತ ವಿಭಾಗಕ್ಕೆ ತುಂಬಾ ಕಷ್ಟದಾಯಕವಾದ ಕೆಲಸವಾಗಿದೆ. ಹೀಗಾಗಿ ನಾವು ಮಾಹಿತಿದಾರರಿಂದ ವಿವರ ಪಡೆದರೇ ಕೆಲಸ, ವೇಗವಾಗಿ ಪರಿಣಾಮಕಾರಿಯಾಗಿ ಮುಗಿಯುತ್ತದೆ, ಒಂದು ವೇಳೆ ನಾವು ಮಾಹಿತಿದಾರರಿಗೆ ಸೂಕ್ತ ಬಹುಮಾನ ನೀಡಿದರೇ, ದೇಶಾದ್ಯಂತ ಬೇನಾಮಿ ಆಸ್ತಿ ಹೊಂದಿರುವವರನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದು, ಸದ್ಯ ಪ್ರಸ್ತಾವನೆ ಹಣಕಾಸು ಇಲಾಖೆ ಬಳಿಯಿದೆ, ಒಂದು ಬಾರಿ ಹಣಕಾಸು ಇಲಾಖೆಯಿಂದ ಅಮುಮೋದನೆ ಪಡೆದು, ಹಣಕಾಸು ಸಚಿವರಿಂದ ಒಪ್ಪಿಗೆಯಾದರೇ, ಕೇಂದ್ರ ತೆರಿಗೆ ನಿರ್ದೇಶನ ಇಲಾಖೆ ಯೋಜನೆಯನ್ನು ಘೋಷಿಸುತ್ತದೆ. ಈ ಯೋಜನೆ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
2016ರ ನವೆಂಬರ್ 1 ರಿಂದ ಬೇನಾಮಿ ಆಸ್ತಿ ವಹಿವಾಟು ನಿಷೇಧ ತಿದ್ದುಪಡಿ ಕಾಯಿದೆ ಜಾರಿಗೆ ಬಂದಿದ್ದು, ಇದುವರೆಗೂ ಅನೇಕ ಬೇನಾಮಿ ಆಸ್ತಿಗಳು ಪತ್ತೆಯಾಗಿವೆ ಎಂದು ವಿವರಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT