ದೇಶ

ಅಲಿಗಢ್: ಯುವತಿಯನ್ನು ಥಳಿಸಿದ ಬಿಜೆಪಿ ನಾಯಕಿಯ ವಿರುದ್ಧ ಕೇಸ್ ದಾಖಲು

Lingaraj Badiger
ಅಲಿಗಢ್: ಟೀ ಅಂಗಡಿಯೊಂದರಲ್ಲಿ ಮುಸ್ಲಿಂ ಯುವಕರೊಂದಿಗೆ ಕುಳಿತಿದ್ದ ಯುವತಿಯನ್ನು ಥಳಿಸಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ನಾಯಕಿಯೊಬ್ಬರ ವಿರುದ್ಧ ಗಾಂಧಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಯುವತಿ ತಂದೆ ನೀಡಿದ ದೂರಿನ ಆಧಾರ ಮೇಲೆ ಬಿಜೆಪಿ ಅಲಿಗಢ್ ಮಹಿಳಾ ಘಟಕದ ನಾಯಕಿ ಸಂಗೀತಾ ವರ್ಷ್ನೇಯ್ ಅವರ ವಿರುದ್ದ ನಿನ್ನೆ ರಾತ್ರಿ ಐಪಿಸಿ ಸೆಕ್ಷೆನ್ 323, 504ರಡಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಸೋಮವಾರ ಟೀ ಅಂಗಡಿಯೊಂದರಲ್ಲಿ ಮುಸ್ಲಿಂ ಯುವಕರೊಂದಿಗೆ ಕುಳಿತಿದ್ದ ಯುವತಿ ಮೇಲೆ ಬಿಜೆಪಿ ನಾಯಕಿ ಕೈ ಮಾಡಿದ್ದರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಆ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
SCROLL FOR NEXT