ಲಿಟಲ್ ರಾಕೇಟ್ ಮ್ಯಾನ್ ಚಿಂತನೆಗಳನ್ನು ಪುನರುಚ್ಛರಿಸಿದ ಉತ್ತರ ಕೊರಿಯಾ ಸಚಿವರಿಗೆ ಟ್ರಂಪ್ ಎಚ್ಚರಿಕೆ !
ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಉತ್ತರ ಕೊರಿಯಾ ವಿದೇಶಾಂಗ ಸಚಿವರ ಭಾಷಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್...
ವಾಷಿಂಗ್ ಟನ್: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಉತ್ತರ ಕೊರಿಯಾ ವಿದೇಶಾಂಗ ಸಚಿವರ ಭಾಷಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಚಿಂತನೆಗಳನ್ನೇ ಭಾಷಣ ಪ್ರತಿನಿಧಿಸಿದೆ.
ಉತ್ತರ ಕೊರಿಯಾ ವಿದೇಶಾಂಗ ಸಚಿವರ ಭಾಷಣ ಲಿಟಲ್ ರಾಕೇಟ್ ಮ್ಯಾನ್ ಚಿಂತನೆಗಳನ್ನೇ ಪ್ರತಿನಿಧಿಸಿದ್ದು ಆ ಚಿಂತನೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಗೆ ಸಾಮಾನ್ಯ ಜ್ಞಾನ ಕಡಿಮೆ ಇದ್ದು, ನಮ್ಮ ರಾಷ್ಟ್ರದ ಸರ್ವೋಚ್ಚ ಘನತೆಗೆ ಅಪಮಾನ ಮಾಡಿದ್ದು ಸರಿಪಡಿಸಲಾಗದ ತಪ್ಪನ್ನು ಮಾಡಿದ್ದಾರೆ ಎಂದು ಉತ್ತರ ಕೊರಿಯಾ ವಿದೇಶಾಂಗ ಸಚಿವರು ಹೇಳಿದ್ದರು.
ಡೊನಾಲ್ಡ್ ಟ್ರಂಪ್ ಅವರನ್ನು ಬುದ್ಧಿಗೇಡಿ ವ್ಯಕ್ತಿ ಎಂಡು ಹೇಳಿದ್ದ ಉತ್ತರ ಕೊರಿಯಾ ಸಚಿವರ ಭಾಷಣಕ್ಕೆ ಟ್ರಂಪ್ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದು ಲಿಟಲ್ ರಾಕೇಟ್ ಮ್ಯಾನ್ ಚಿಂತನೆಗಳನ್ನೇ ಪ್ರತಿನಿಧಿಸಿದ್ದು ಆ ಚಿಂತನೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.