ದೇಶ

ದೇಶದಲ್ಲಿ 2020ಕ್ಕೆ ಹೈಸ್ಪೀಡ್ 5ಜಿ ಸೇವೆ: ಮನೋಜ್ ಸಿನ್ಹಾ

Vishwanath S
ನವದೆಹಲಿ: 2020ರೊಳಗೆ ದೇಶದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಲಬೇಕೆಂಬ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ ಎಂದು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ತಿಳಿಸಿದ್ದಾರೆ. 
ದೇಶದಲ್ಲಿ ಹೈಸ್ಪೀಡ್ ಡೇಟಾ ಸೇವೆಗಳು ಒದಗಿಸಲು ಕೇಂದ್ರ ಸರ್ಕಾರ ಮಹತ್ತರ ಯೋಜನೆಗೆ ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು ಅದರಲ್ಲಿ ಟೆಲಿಕಾಂ, ಮಾಹಿತಿ ತಂತ್ರಜ್ಞಾನ, ವಿಜ್ಞಾನ ತಂತ್ರಜ್ಞಾನ ಸಚಿವಾಲಯ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ.
ಸಾಧ್ಯವಾದಷ್ಟು ಬೇಗ 5ಜಿ ಸೇವೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ. 2020ರಿಂದ ಜಗತ್ತಿನ ಹಲವು ದೇಶಗಳು 5ಜಿ ಸೇವೆ ಆರಂಭಿಸಲಿವೆ. ಈ ವಿಚಾರದಲ್ಲಿ ಬೇರೆ ದೇಶಗಳ ಜತೆ ನಾವು ಸ್ಪರ್ಧಿಸಬೇಕು ಎಂದು ಮನೋಜ್ ಸಿನ್ಹಾ ಹೇಳಿದ್ದಾರೆ. 
5ಜಿ ತಂತ್ರಜ್ಞಾನದ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 500 ಕೋಟಿ ರುಪಾಯಿಯನ್ನು ಮೀಸಲಿರಿಸಿದೆ. 5ಜಿ ತಂತ್ರಜ್ಞಾನದ ಸಹಾಯದಿಂದ ನಗರ ಪ್ರದೇಶಗಳಲ್ಲಿ ಸೆಕೆಂಡ್ ಗೆ 10 ಸಾವಿರ ಎಂಬಿ, ಗ್ರಾಮಿಣ ಪ್ರದೇಶದಲ್ಲಿ 1 ಸಾವಿರ ಎಂಬಿ ವೇಗದ ಸೇವೆಗಳನ್ನು ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದರು.
SCROLL FOR NEXT