Human shield victim Farooq 
ದೇಶ

ಮತ ಹಾಕಲು ಬಂದವನ ತಪ್ಪಾಗಿ ತಿಳಿದು ಮಾನವ ಗುರಾಣಿಯಾಗಿ ಕಾರಿಗೆ ಕಟ್ಟಿದರೇ ಸೈನಿಕರು!

ಸಾಕಷ್ಟು ಟೀಕೆ ಹಾಗೂ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದ ಕಾಶ್ಮೀರದ ಮಾನವ ಗುರಾಣಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಸೇನಾ ವಾಹನಕ್ಕೆ ಕಟ್ಟಿಹಾಕಿದ್ದ ವ್ಯಕ್ತಿ ಆ ದಿನ ಬೆಳಿಗ್ಗೆ ಮತ ಚಲಾಯಿಸಲು ಹೋಗಿದ್ದ ಎಂದು ಪೊಲೀಸರ ತನಿಖಾ...

ಶ್ರೀನಗರ: ಸಾಕಷ್ಟು ಟೀಕೆ ಹಾಗೂ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದ ಕಾಶ್ಮೀರದ ಮಾನವ ಗುರಾಣಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಸೇನಾ ವಾಹನಕ್ಕೆ ಕಟ್ಟಿಹಾಕಿದ್ದ ವ್ಯಕ್ತಿ ಆ ದಿನ ಬೆಳಿಗ್ಗೆ ಮತ ಚಲಾಯಿಸಲು ಹೋಗಿದ್ದ ಎಂದು ಪೊಲೀಸರ ತನಿಖಾ ವರದಿಯಲ್ಲಿ ಬಹಿರಂಗಗೊಂಡಿದೆ. 

ಸೇನಾ ವಾಹನಕ್ಕೆ ಕಟ್ಟಿ ಹಾಕಿ ಸುಮಾರು 5 ಗಂಟೆಕೂ ಹೆಚ್ಚು ಕಾಲ ಸುತ್ತಾಡಿಸಲ್ಪಟ್ಟಿದ್ದ ಫಾರೂಖ್ ಅಹ್ಮದ್ ಏಪ್ರಿಲ್.9 ರಂದು ಮತ ಚಲಾಯಿಸಲು ಹೋಗಿದ್ದ ಎಂದು ಪೊಲೀಸರು ತನಿಖಾ ವರದಿಯಲ್ಲಿ ತಿಳಿಸಿದ್ದಾರೆ. 

ಸಂತ್ರಸ್ತ ಫಾರೂಕ್ ಕಸೂತಿ ಕೆಲಸಗಾರನನಾಗಿದ್ದು, ಏಪ್ರಿಲ್.9 ರಂದು ತನ್ನ ಹುಟ್ಟೂರಾದ ಚಿಲ್'ಲ್ ಎಂಬಲ್ಲಿನ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ್ದ. ಮತ ಚಲಾಯಿಸಿದ ಬಳಿಕ ಆತ ಸಂಬಂಧಿಕ ಹಿಲಾಲ್ ಅಹ್ಮದ್ ಮಗ್ರೆ ಎಂಬಾತನ ಜೊತೆಗೆ ಗಂಪೋರಾದಲ್ಲಿ ನಡೆಯಲಿದ್ದ ಸಂತಾಪ ಸಭೆಗೆ ಹೊರಟಿದ್ದ. ಈ ವೇಳೆ ಸೇನಾಧಿಕಾರಿಗಳು ಫಾರೂಖ್ ನನ್ನು ಹಿಡಿದು ಸೇನಾ ಜೀಪಿಗೆ ಕಟ್ಟಿ ಹಾಕಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ. 

ಪ್ರಸ್ತುತ ಪ್ರಕರಣದ ತನಿಖೆ ಮುಂದುವರೆದಿದ್ದು, ಜಿಲ್ಲಾ ಚುನಾವಣಾ ಕಚೇರಿ ಬುದ್ಗಾಮ್/ಕಾಯ್ ಕಮಾಂಡರ್ 53 ಆರ್'ಆರ್ ಕ್ಯಾಂಪ್ ಬೀರ್ ವಾಹ್ ಇವರಿಂದ ವರದಿಗಳನ್ನು ಪಡೆದುಕೊಂಡು, ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿ ಪ್ರಕರಣದ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಸಂತ್ರಸ್ತ ಫಾರೂಕ್ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ನಾಯಕನಾಗಿದ್ದ ಹಾಗೂ ಗುಂಪೊಂದರ ನೇತೃತ್ವ ವಹಿಸಿದ್ದ ಎಂದು ಈ ಹಿಂದೆ ಸೇನಾ ವಾಹನಕ್ಕೆ ಆತನನ್ನು ಕಟ್ಟಿ ಹಾಕಲು ಆದೇಶಿಸಿದ್ದ ಸೇನಾಧಿಕಾರಿ ಮೇಜಲ್ ಲೀತುಲ್ ಗೊಗೊಯ್ ಅವರು ವಾದಿಸಿದ್ದರು.

ಪ್ರಕರಣ ಸಂಬಂಧ ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿದ್ದ ಫಾರೂಕ್ ತನ್ನ ಅಳಲನ್ನು ತೋಡಿಕೊಂಡಿದ್ದ. ಶ್ರೀನಗರ ಲೋಕಸಭಾ ಉಪಚುನಾವಣೆಗಾಗಿ ಮತ ಚಲಾಯಿಸಲು ಅರಿಝಲ್'ನ ಚಿಲ್'ಲ್ ಬ್ರಾಸ್ ಪ್ರದೇಶದಲ್ಲಿ ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತಿದ್ದೆ. ಈ ಮೂಲಕ ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿದ್ದ ಪ್ರತ್ಯೇಕತಾವಾದಿಗಳಿಗೆ ಸವಾಲೊಡ್ಡಿದ್ದೆ. ನಾನು ಪ್ರಜಾಪ್ರಭುತ್ವಕ್ಕಾಗಿ ಮತ ಚಲಾಯಿಸಿದವನಾಗಿರುವಾಗ ಇತರರು ಮತ ಚಲಾಯಿಸುವುದನ್ನು ತಡೆದು ನಾನೇಕೆ ಕಲ್ಲು ತೂರಾಟ ನಡೆಸಲಿ? ಎಂದು ಪ್ರಶ್ನಿಸಿದ್ದ. 

ಪ್ರತ್ಯೇಕತಾವಾದಿಗಳು ಹಾಗೂ ಉಗ್ರರಿಗೆ ಸೆಡ್ಡು ಹೊಡೆದು ಮತ ಚಲಾಯಿಸಿದ್ದಕ್ಕೆ ನನ್ನನ್ನು ಮಾನವ ಗುರಾಣಿಯಾಗಿ ಮಾಡಿಬಿಟ್ಟರು. ಮುಂದೆಂದೂ ನಾನು ಮತ ಚಲಾಯಿಸುವುದಿಲ್ಲ ಎಂದು ಹೇಳಿದ್ದ. 

ಕಳೆದ ಏಪ್ರಿಲ್ 9ರಂದು ಕಾಶ್ಮೀರದಲ್ಲಿ ಭುಗಿಲೆದ್ದಿದ್ದ ವ್ಯಾಪಕ ಹಿಂಸಾಚಾರ ಮತ್ತು ಕಲ್ಲು ತೂರಾಟ ನಿಗ್ರಹಕ್ಕಾಗಿ ಸೇನಾ ಯೋಧ ಮೇಜರ್ ನಿತಿನ್ ಗಗೋಯ್ ಅವರು, ಕಲ್ಲು ತೂರಾಟಗಾರರ ನಾಯಕ ರೂಕ್ ಅಹ್ಮದ್ ದಾರ್ ನನ್ನು  ಸೇನಾವಾಹನಕ್ಕೆ ಕಟ್ಟಿ ಮಾನವ ಗುರಾಣಿಯಾಗಿ ಬಳಕೆ ಮಾಡಿದ್ದರು. ಈ ವಿಚಾರ ದೇಶಾದ್ಯಂತ ವ್ಯಾಪಕ ವೈರಲ್ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT