ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮದುವೆ ದಂಧೆ: ಹೈದರಾಬಾದ್ ಪೊಲೀಸರಿಂದ ಮತ್ತೆ 3 ಒಮನ್ ನಾಗರಿಕರ ಬಂಧನ

'ಒಪ್ಪಂದದ ಮದುವೆ' ಎಂಬ ಹೆಸರಿನಲ್ಲಿ ಗಲ್ಫ್ ದೇಶಗಳಿಗೆ ಅಪ್ರಾಪ್ತ ಬಾಲಕಿಯರ ಕಳ್ಳ ಸಾಗಾಣೆ ಮಾಡುತ್ತಿದ್ದ ಆರೋಪದ....

ಸಾಂದರ್ಭಿಕ ಚಿತ್ರ
Lingaraj Badiger
Updated On : 26 Sept 2017, 6:21 am
ಹೈದರಾಬಾದ್: 'ಒಪ್ಪಂದದ ಮದುವೆ' ಎಂಬ ಹೆಸರಿನಲ್ಲಿ ಗಲ್ಫ್ ದೇಶಗಳಿಗೆ ಅಪ್ರಾಪ್ತ ಬಾಲಕಿಯರ ಕಳ್ಳ ಸಾಗಾಣೆ ಮಾಡುತ್ತಿದ್ದ ಆರೋಪದ ಮೇಲೆ ಹೈದರಾಬಾದ್ ಪೊಲೀಸರು ಮುಖ್ಯ ಖ್ವಾಜಿ ಹಾಗೂ ಮತ್ತೆ ಮೂವರು ಒಮನ್ ನಾಗರಿಕರನ್ನು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಒಮನಿ ಪ್ರಜೆ 70 ವರ್ಷದ ಅಲ್ ಸೆಯೀದಿ ಸುಲೈಮಾನ್ ತಾನು ಚಿಕಿತ್ಸೆಗಾಗಿ ಹೈದರಾಬಾದ್ ಗೆ ಬಂದಿರುವುದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಆದರೆ ಆತ ಬಂದಿದ್ದು ಮದುವೆ ಮಾಡಿಕೊಳ್ಳಲು ಮತ್ತು ಇದಕ್ಕಾಗಿ ಅಪ್ರಾಪ್ತ ಹುಡುಗಿಯ ಹುಡುಕಾಟದಲ್ಲಿರುವುದು ಪತ್ತೆಯಾಗಿದೆ ಎಂದು ಉಪ ಪೊಲೀಸ್ ಆಯುಕ್ತ(ದಕ್ಷಿಣ ವಲಯ) ವಿ ಸತ್ಯನಾರಾಯಣ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಒಮನ್ ಮದುವೆ ಬ್ರೋಕರ್ ಅಲ್ ಶಯದಿ ಖಲ್ಪಾನ್ ಸುಲೈಮಾನ್ ನನ್ನು ಮದುವೆ ಮಾಡಿಸುವುದಕ್ಕಾಗಿ ಹೈದರಾಬಾದ್ ಗೆ ಕರೆದಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸತ್ಯನಾರಾಯಣ ಅವರು ಹೇಳಿದ್ದಾರೆ.  

Advertisement

Advertisement

ಮತ್ತೊಬ್ಬ ಬಂಧಿತ ಒಮನ್ ಅಲ್ ಅವ್ಡಿ ಯಾಸಿರ್ ಎಂದು ಗುರುತಿಸಲಾಗಿದ್ದು, ಈ ಮೂವರೊಂದಿಗೆ ವಿದೇಶಿಯರಿಗೆ ಬಾಲಕಿಯರನ್ನು ಒದಗಿಸುತ್ತಿದ್ದ ಆರೋಪದ ಮೇಲೆ ಮುಖ್ಯ ಖ್ವಾಜಿ ಅಲಿ ಅಬ್ದುಲ್ಹಾ ರಿಫೈನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ಬುಧವಾರ ಮದುವೆಯನ್ನೇ ಒಂದು ದಂಧೆ ಮಾಡಿಕೊಂಡಿದ್ದ ಆರೋಪದ ಮೇಲೆ ಎಂಟು ಶೇಖ್ ಗಳನ್ನು ಹಾಗೂ ನಾಲ್ವರು ಮುಸ್ಲಿಂ ಮೌಲ್ವಿಗಳನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು.
ಇಂತಾ ಮದುವೆ ದಂಧೆ ಇದೇ ಮೊದಲೇನಲ್ಲ. ಈ ಹಿಂದೆಯೂ ಪೊಲೀಸರು ಹಲವು ಮದುವೆ ಜಾಲಗಳನ್ನ ಬಯಲಿಗೆಳೆದಿದ್ದರು. ಹೆತ್ತವರಿಗೆ ಹಣದ ಆಮಿಷವೊಡ್ಡಿ ತಮ್ಮ ಹೆಣ್ಣು ಮಕ್ಕಳನ್ನು ಶೇಖ್‌ಗಳಿಗೆ ಒಪ್ಪಂದದ ನೆಲೆಯಲ್ಲಿ ನೆಲೆಯಲ್ಲಿ ಮದುವೆ ಮಾಡಿಕೊಡುವಂತೆ ಮನವೊಲಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement