ದೇಶ

ಪಿಒಕೆಯಲ್ಲಿ ನಡೆಸಿದಂತೆ ಕಾಂಗೋದಲ್ಲಿ ಸರ್ಜಿಕಲ್ ದಾಳಿ ನಡೆಸಿ 22 ಮಕ್ಕಳನ್ನು ರಕ್ಷಿಸಿದ ಭಾರತೀಯ ಸೇನೆ

Vishwanath S
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿ ಜಗತ್ತಿಗೆ ತನ್ನ ತಾಕತ್ತನ್ನು ತೋರಿಸಿದ್ದ ಭಾರತೀಯ ಸೇನೆ ಇದೀಗ ವಿಶ್ವಸಂಸ್ಥೆಯ ಶಾಂತಿ ಪಾಲನೆಗಾಗಿ ನಿಯೋಜನೆಗೊಂಡಿರುವ ಭಾರತೀಯ ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಉಗ್ರ ಕಪಿಮುಷ್ಠಿಗೆ ಸಿಲುಕ್ಕಿದ್ದ 22 ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಕಾಂಗೋ ಗಣರಾಜ್ಯದಲ್ಲಿ ಶಾಂತಿ ಪಾಲನೆಗಾಗಿ ನಿಯೋಜನೆಗೊಂಡಿರುವ ಭಾರತೀಯ ಸೇನೆಯೂ ಆಂತರಿಕ ಗಲಭೆ ಪೀಡಿತ ನ್ಯಾಬಿವೊಂಡೋ ಪ್ರಾಂತ್ಯದಲ್ಲಿ ಬಂಡುಕೋರರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಯೋಧರು ಬಂಡುಕೋರರಿಂದ ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿದ್ದ 22 ಮಕ್ಕಳನ್ನು ರಕ್ಷಿಸಿ ಕರೆತಂದಿದ್ದು ಭಾರತೀಯ ಯೋಧರ ಸಾಹಸವನ್ನು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುತ್ತಿದೆ. 
ಕಾಂಗೋದಲ್ಲಿ ಬಂಡುಕೋರರು ಸಾವಿರಾರು ಮಂದಿ ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಇತರ ಕ್ರೂರ ಉಗ್ರರಿಗೆ ಯಾವುದೇ ಸುಳಿವೇ ಇಲ್ಲದಂತೆ ಒಮ್ಮೆಲೆ ದಾಳಿ ನಡೆಸಿ 16 ಗಂಡು ಹಾಗೂ 8 ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ. ಇಷ್ಟು ಮಾತ್ರವಲ್ಲ ಬಂಡುಕೋರರ ಹಿಡಿತದಲ್ಲಿದ್ದ ಅಮಾಯಕರನ್ನೂ ರಕ್ಷಿಸುವಲ್ಲಿ ಸೇನಾಪಡೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. 
ಭಾರತದ ಮತ್ತೊಂದು ತುಕಡಿಯು ಬಂಡುಕೋರರ ಹಿಡಿತಕ್ಕೆ ಪಡೆಯಲು ಯತ್ನಿಸುತ್ತಿದ್ದ ಮಿರ್ಕಿ ಎಂಬ ಹಳ್ಳಿಯಲ್ಲಿದ್ದ ಸುಮಾರು 200 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ. 
SCROLL FOR NEXT