ದೇಶ

ದಕ್ಷಿಣ ಏಷ್ಯಾದ ಪ್ರತಿಷ್ಠಿತ ಡಿಎಸ್ ಸಿ 2017 ಪ್ರಶಸ್ತಿ ರೇಸ್ ನಲ್ಲಿ ಬೂಕರ್ ವಿಜೇತ ಅರವಿಂದ ಅಡಿಗ

Raghavendra Adiga
ನವದೆಹಲಿ: ಮ್ಯಾನ್ ಬೂಕರ್ ವಿಜೇತ ಅರವಿಂದ ಅಡಿಗ  ದಕ್ಷಿಣ ಏಷ್ಯಾದ ಸಾಹಿತ್ಯಕ್ಕಾಗಿ ಕೊಡಲ್ಪಡುವ ಪ್ರಸಕ್ತ ಸಾಲಿನ ಡಿಎಸ್ ಸಿ ಪ್ರಶಸ್ತಿ ರೇಸ್ ನಲ್ಲಿದ್ದಾರೆ.
ಅಡಿಗ ಅವರ ಪುಸ್ತಕ "ಸೆಲೆಕ್ಷನ್ ಡೇ"ಪ್ರಶಸ್ತಿ ಸುತ್ತಿಗೆ ಆಯ್ಕೆ ಆಗಿದೆ.
ಅಂಜಲಿ ಜೋಸೆಫ್ ("ದಿ ಲಿವಿಂಗ್"), ಶ್ರೀಲಂಕಾದ ಅನೂಕ್ ಅರುದ್ ಪ್ರಗಾಸಮ್ ("ದಿ ಸ್ಟೋರಿ ಆಫ್ ಎ ಬ್ರೀಫ್ ಮ್ಯಾರೇಜ್"), ಕರಣ್ ಮಹಾಜನ್ ("ದಿ ಅಸೋಸಿಯೇಷನ್ ಆಫ್ ಸ್ಮಾಲ್ ಬಾಂಬ್ಸ್") ಮತ್ತು ಸ್ಟೀಫನ್ ಅಲ್ಟರ್ ("ಇನ್ ದಿ ಜಂಗಲ್ಸ್ ಆಫ್ ದಿ ನೈಟ್") ಇವರುಗಳು ಸಹ ಅಡಿಗ ಅವರೊಡನೆ ಪ್ರಶಸ್ತಿ ಸುತ್ತಿಗೆ ಆಯ್ಕೆ ಆಗಿದ್ದಾರೆ.
ಪ್ರಶಸ್ತಿ ಸುತ್ತಿಗೆ ಆಯ್ಕೆ ಆದವರ ಹೆಸರನ್ನು ಪ್ರಶಸ್ತಿ ಆಯ್ಕೆ ಮಂದಳಿ ಅಧ್ಯಕ್ಷರಾದ ರಿತು ಮೆನನ್, ಸನತ್ ವಾಲ್ಟರ್ ಪೆರೇರಾ, ಸ್ಟೀವನ್ ಬರ್ನ್ ಸ್ಟೀನ್, ವ್ಯಾಲೆಂಟೈನ್ ಕನ್ನಿಂಗ್ಹ್ಯಾಮ್ ಮತ್ತು ಯಾಸ್ಮಿನ್ ಅಲಿಬಾಯ್-ಬ್ರೌನ್ ಜತೆಗೂಡಿ ಪ್ರಕಟಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ಈ ಪುರಸ್ಕಾರ ನೀದಲಾಗುತ್ತಿದ್ದು ಇದು ಏಲನೇ ವರ್ಷದ ಪ್ರಶಸ್ತಿ ಆಗಿದೆ. ದಕ್ಷಿಣ ಏಷ್ಯಾದ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶ ಇದರ ಹಿಂದಿದೆ.
SCROLL FOR NEXT