ದೇಶ

ರಾಹುಲ್ ಗಾಂಧಿ ಕ್ರಿಶ್ಚಿಯನ್, ಅವರ 10 ಜನಪತ್ ನಿವಾಸದೊಳಗೆ ಚರ್ಚ್ ಇದೆ: ಸುಬ್ರಹ್ಮಣ್ಯನ್ ಸ್ವಾಮಿ

Sumana Upadhyaya
ನವದೆಹಲಿ: ಗುಜರಾತ್ ನ ದೇವಸ್ಥಾನಗಳಿಗೆ ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ್ದನ್ನು ಟೀಕಿಸಿರುವ ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ, ರಾಹುಲ್ ಗಾಂಧಿ ತಾವು ಮೊದಲಿಗೆ ಹಿಂದು ಎಂಬುದನ್ನು ಸಾಬೀತುಪಡಿಸಲಿ ಎಂದಿದ್ದಾರೆ.
ತಾವು ಹಿಂದೂ ಎಂದು ರಾಹುಲ್ ಗಾಂಧಿ ಮೊದಲು ಘೋಷಿಸಲಿ ಎಂದು ಸುಬ್ರಹ್ಮಣ್ಯ ಸ್ವಾಮಿ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಬಗ್ಗೆ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಅವರು, ರಾಹುಲ್ ಗಾಂಧಿ ಕ್ರಿಸ್ತಿಯನ್ ಎಂಬ ಸಂಶಯ ನನಗೆ. ಅವರ 10 ಜನಪಥ್ ಮನೆಯೊಳಗೆ ಚರ್ಚ್ ಕೂಡ ಇದೆ ಎಂದರು.
ರಾಹುಲ್ ಗಾಂಧಿ ನಿನ್ನೆಯವರೆಗೆ ಗುಜರಾತ್ ರಾಜ್ಯದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ಅನೇಕ ದೇವಸ್ಥಾನಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದರು. ತಾವು ಹಿಂದೂ ವಿರೋಧಿ ಎಂಬ ಭಾವನೆಯನ್ನು ಜನರ ಮನಸ್ಸಿನಿಂದ ತೆಗೆದುಹಾಕಲು ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಹುಲ್ ಅವರ ದೇವಸ್ಥಾನ ಭೇಟಿಯನ್ನು ಟೀಕಿಸಿರುವ ಬಿಜೆಪಿ, ರಾಹುಲ್ ಗಾಂಧಿಯವರ ದೇವಸ್ಥಾನ ಭೇಟಿ ಕಣ್ಣೆರೊಸೆವು ತಂತ್ರವಾಗಿದ್ದು ಇದರಿಂದ ಹಿಂದೂ ಧರ್ಮಕ್ಕೆ ಮತ್ತು ಹಿಂದೂಗಳಿಗೆ ಯಾವ ರೀತಿಯಲ್ಲಿಯೂ ಪ್ರಯೋಜನವಾಗದು ಎಂದು ಹೇಳಿದ್ದಾರೆ.
SCROLL FOR NEXT