ಜಾಗತಿಕ ಶಾಂತಿ ಸಮ್ಮೇಳನಕ್ಕಾಗಿ ಮಣಿಪುರಕ್ಕೆ ದಲೈ ಲಾಮ ಭೇಟಿ
ಮಣಿಪುರದಲ್ಲಿ ಜಾಗತಿಕ ಶಾಂತಿ ಸಮ್ಮೇಳನ ನಡೆಯಲಿದ್ದು ಬೌದ್ಧ ಧರ್ಮ ಗುರು ದಲೈ ಲಾಮ ಮಣಿಪುರದ ಇಂಫಾಲಕ್ಕೆ ಭೇಟಿ ನೀಡಲಿದ್ದಾರೆ.
ಇಂಫಾಲ: ಮಣಿಪುರದಲ್ಲಿ ಜಾಗತಿಕ ಶಾಂತಿ ಸಮ್ಮೇಳನ ನಡೆಯಲಿದ್ದು ಬೌದ್ಧ ಧರ್ಮ ಗುರು ದಲೈ ಲಾಮ ಮಣಿಪುರದ ಇಂಫಾಲಕ್ಕೆ ಭೇಟಿ ನೀಡಲಿದ್ದಾರೆ.
ದಲೈ ಲಾಮ ಮಣಿಪುರಕ್ಕೆ ಆಗಮಿಸುತ್ತಿರುವುದನ್ನು ಮಣಿಪುರದ ಶಾಸಕ ಖೇಮ್ಚಂದ್ ಸ್ಪಷ್ಟಪಡಿಸಿದ್ದು, ಅ.18 ರಂದು ಜಾಗತಿಕ ಶಾಂತಿ ಸಮ್ಮೇಳನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಮ್ಮೇಳನದಲ್ಲಿ ಧಾರ್ಮಿಕ ನಾಯಕರು ಮಾತನಾಡಲಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.
ದಲೈ ಲಾಮ ಅವರನ್ನು ಕಳೆದ ಬಾರಿ ಭೇಟಿ ಮಾಡಿದ್ದಾಗ ಮಣಿಪುರಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದೆ, ಆಹ್ವಾನಕ್ಕೆ ದಲೈ ಲಾಮ ಒಪ್ಪಿದ್ದರು ಎಂದು ಖೇಮ್ಚಂದ್ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.