ನವದೆಹಲಿ: ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆರು ವರ್ಷದ ಬಾಲಕನ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 19 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸೆಪ್ಟಂಬರ್ 27 ರಂದು ಓಕ್ಲಾ ಎಂಬ ಕೊಳಚೆ ಪ್ರದೇಶಿದಿಂದ ಬಾಲಕ ನಾಪತ್ತೆಯಾಗಿದ್ದ. ಈ ಸಂಬಂಧ ರೋಹಿತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಪತ್ನಿಯು ಸ್ನಾನ ಮಾಡುವುದನ್ನು ಪಕ್ಕದ ಮನೆಯ 6 ವರ್ಷದ ಬಾಲಕ ಕದ್ದು ನೋಡಿದ್ದಾನೆ. ಅಲ್ಲದೇ, ಆಕೆಯ ಬಗ್ಗೆ ಅಶ್ಲೀಲವಾಗಿಯೂ ಮಾತನಾಡಿದ್ದಾಗಿ ಆರೋಪಿಸಿದ್ದಾನೆ.
ಸಿಟ್ಟಿನಲ್ಲಿ ಬಾಲಕನ ಮೇಲೆ ರೋಹಿತ್ ಹಲ್ಲೆ ಮಾಡಿದ್ದ. ಈ ವೇಳೆ, ಬಾಲಕನ ತಲೆಗೆ ಗಾಯವಾಗಿತ್ತು.ಗಾಬರಿಗೊಂಡ ರೋಹಿತ್ ಆ ಬಾಲಕನ ನರಳಾಟ ಆಚೆಗೆ ಕೇಳಿಸಬಾರದೆಂದು ಮುಖವನ್ನು ಬಟ್ಟೆಯಿಂದ ಬಿಗಿದು. ಬಳಿಕ ಹಾಸಿಗೆಯ ಬಾಕ್ಸ್'ನೊಳಗೆ ದೇಹವನ್ನು ಇರಿಸಿ ಆತ ತಲೆ ಮರೆಸಿಕೊಂಡಿದ್ದ. ಜೊತೆಗೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದ.
ಬುಧವಾರ ಸಂಜೆ ಈ ಘಟನೆ ನಡೆದಿದ್ದು. ಎರಡು ದಿನಗಳ ಬಳಿಕ ಬಾಲಕನ ಶವದಿಂದ ಕೆಟ್ಟವಾಸನೆ ಬರುತ್ತಿತ್ತು, ಇದನ್ನು ಗಮನಿಸಿದ ನೆರೆಹೊರೆಯವರು ದುರ್ವಾಸನೆ ಬರುತ್ತಿದ್ದ ಕೊಠಡಿಯ ಬಾಗಿಲು ತೆಗೆದಿದ್ದಾರೆ. ಇಲಿ ಸತ್ತಿರಬೇಕು ಎಂದು ಭಾವಿಸಿ ಬಾಗಿಲು ತೆಗೆದೆವು. ಆದರೆ ಕೊಠಡಿಯಲ್ಲಿದ್ದ ಬೆಡ್ ಬಾಕ್ಸ್ ನಲ್ಲಿ ಗೋಣಿ ಚೀಲವಿತ್ತು. ಅಲ್ಲೇ ಬಾಲಕನ ತಲೆ ಮತ್ತು ಕೈ ಕಾಣಿಸುತ್ತಿತ್ತು. ಬಾಲಕನ ಮುಖವನ್ನು ಕಪ್ಪು ಬಣ್ಣದ ಬಟ್ಟೆಯಿಂದ ಕಟ್ಟಿಹಾಕಿದ್ದರು ಎಂದು ಪ್ರತ್ಯಕ್ಷದರ್ಶಿ ರಾಧಾ ಹೇಳಿದ್ದಾರೆ.
ನಂತರ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ತಪ್ಪೊಪ್ಪಿ ಕೊಂಡಿದ್ದಾನೆ. ಮೊದಲಿಗೆ ಬಾಲಕನನ್ನು ಕಿಡ್ನಾಪ್ ಮಾಡಿ ಬಾಲಕನ ತಂದೆಯ ಬಳಿ 20ಸಾವಿರ ಹಣಕ್ಕೆ ಬೆದರಿಕೆ ಹಾಕಿದ್ದಾಗಿ ರೋಹಿತ್ ತಪ್ಪೊಪ್ಪಿಕೊಂಡಿದ್ದಾನೆ.