ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ
ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜಾತಿ-ಧರ್ಮಗಳ ಗಡಿ ಮೀರಿ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.
ನಾಯಕ ಸಮರ್ಥನಿದ್ದಾಗ ಮಾತ್ರ ಭಾರತ ವಿಶ್ವದ ಪ್ರಮುಖ ನಾಯಕನಾಗಬಹುದು, ಅಂಥಹ ಸಾಮರ್ಥ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ, ಪ್ರಧಾನಿ ನರೇಂದ್ರ ಮೋದಿ ಬೇರೆ ರಾಷ್ಚ್ರಗಳಲ್ಲಿರುವಂತೆ ಇತರೆ ಮುಸ್ಲಿಂ ರಾಷ್ಟ್ರಗಳಲ್ಲೂ ಅಷ್ಟೇ ಪ್ರಮಾಣದ ಜನಪ್ರಿಯತೆ ಗಳಿಸಿದ್ದಾರೆ, ಏಕೆಂದರೇ ಮೋದಿ ಜಾತಿ, ಮತಗಳ ಗಡಿಯನ್ನು ಮೀರಿ ಕೆಲಸ ಮಾಡಿದ್ದಾರೆ ಎಂದು ನಕ್ವಿ ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ದೇಶದ ಪ್ರತಿ ಹಳ್ಳಿಯ ಬಡ ಹಾಗೂ ಯುವಕರನ್ನು ತಲುಪುವುದೇ ಪ್ರಧಾನಿ ಮೋದಿ ಅವರ ಪ್ರಮುಖ ಅಜೆಂಡಾವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಅವರ ಉತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಅವರು, ಯಾವುದೇ ಸಮಯದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಹುರುಪಿನಿಂದಲೇ ಕೆಲಸ ಮಾಡುತ್ತಾರೆ, ಅವರ ಆಡಳಿತಾವಧಿಯಲ್ಲಿ ದೇಶ ಮಹತ್ವದ ಸುಧಾರಣೆ ಕಾಣುತ್ತದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.