ಕೊಚ್ಚಿ: ಇಲ್ಲಿನ ನೌಕಾನೆಲೆಯ ನೌಕೆಯೊಂದರಲ್ಲಿ ನಡೆದ ಗುಂಡಿನ ಧಾಳಿಯಲ್ಲಿ ನೌಕಾಪಡೆ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದೆ.
ನೌಕೆಯಲ್ಲಿ ಕರ್ತವ್ಯದ ಮೇಲಿದ್ದ ಅಧಿಕಾರಿ ತನ್ನ ಸೇವಾ ಬಂದೂಕಿನಿಂದ ಅಕಸ್ಮಾತ್ ಆಗಿ ಹಾರಿದ ಗುಂಡಿನಿಂದ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ನೌಕಾದಳದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಶುಶ್ರೂಷೆ ಪಲಕಾರಿಯಾಗದೆ ಅಧಿಕಾರಿ ಮೃತಪಟ್ಟಿದ್ದಾರೆ.
ಕೊಚ್ಚಿಯ ನೌಕಾ ನೆಲೆಯು ದಕ್ಷಿಣ ನೌಕಾ ಕಮಾಂಡೋಗಳ ಪ್ರಧಾನ ಕಾರ್ಯಾಲಯವನ್ನು ಒಳಗೊಂಡಿದ್ದು, ಇದು ಭಾರತೀಯ ನೌಕಾಪಡೆಯ ಮೂರು ಮುಖ್ಯ ಕಾರ್ಯಾಲಯಗಳಲ್ಲಿ ಒಂದಾಗಿದೆ.
ಘಟನೆ ಕುರಿತ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.