ಶಿರಡಿ ವಿಮಾನ ನಿಲ್ದಾಣವನ್ನು ದೇಶಕ್ಕೆ ಸಮರ್ಪಿಸಿದ ರಾಷ್ಟ್ರಪತಿ ಕೋವಿಂದ್
ಅಹಮದ್ ನಗರ: ಅಹಮದ್ ನಗರದಲ್ಲಿರುವ ನೂತನಶಿರಡಿ ವಿಮಾನ ನಿಲ್ದಾಣವನ್ನು ಭಾನುವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಉದ್ಘಾಟಿಸಿದರು. ಉದ್ಘಾಟನಾರ್ಥವಾಗಿ ಶಿರಡಿ ಯಿಂದ ಮುಂಬೈಗೆ ಪ್ರಥಮ ವಾಣಿಜ್ಯ ವಿಮಾನ ಹಾರಾಟ ನಡೆಸಲಾಯಿತು.
ಮಹಾರಾಷ್ಟ್ರ ವಿಮಾನನಿಲ್ದಾಣ ಅಭಿವೃದ್ಧಿ ನಿಗಮ (ಎಂಎಡಿಸಿ) ಅಭಿವೃದ್ಧಿಪಡಿಸಿದ ವಿಮಾನನಿಲ್ದಾ ಣದುದ್ಗಾಟನೆ ಇಂದು ನೆರವೇರಿದೆ. ಸಾಯಿಬಾಬಾ ಸಮಾಧಿಯಾದ ಶತಮಾನೋತ್ಸವದ ಆಚರಣೆಯ ಕಾರ್ಯಕ್ರಾಮ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದ್ದು ವರ್ಷವಿಡೀ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಾಮಗಳು ನಡೆಯಲಿದೆ.ೀ ಕಾರ್ಯಕ್ರಾಮಕ್ಕಾಗಿ ವಿಶ್ವಾದ್ಯಂತದ ಹನ್ನೊಂದು ಮಿಲಿಯನ್ ಭಕ್ತರು ಶಿರಡಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ಈ ವಿಮಾನ ಸೇವೆಯಿಂದಾಗಿ ಮುಂಬೈನಿಂದ ಶಿರಡಿಗೆ 240 ಕಿಮೀ ದೂರದ ಆರು ತಾಸಿನ ಪ್ರಯಾಣವು 45 ನಿಮಿಷಗಳಿಗೆ ಇಳಿಕೆ ಆಗಲಿದೆ.
ವಿಮಾನ ನಿಲ್ದಾನ ಉದ್ಘಾಟನಾ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಸಿ.ವಿ. ರಾವ್, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಪ್ರತಿಪಕ್ಷ ನಾಯಕ ರಾಧಾಕೃಷ್ಣ ವಿಖೆ-ಪಾಟೀಲ್, ಎಂಎಡಿಸಿ ಉಪಾಧ್ಯಕ್ಷ ಮತ್ತು ಎಂಡಿ ಸುರೇಶ್ ಕಕಾನಿ, ಸೇರಿ ಕೇಂದ್ರ ಮತ್ತು ರಾಜ್ಯದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ಪಶ್ಚಿಮ ಮಹಾರಾಷ್ಟ್ರದ ಸಣ್ಣ ಪಟ್ಟಣವು 20 ನೇ ಶತಮಾನದ ಸಂತ ಸಾಯಿ ಬಾಬಾರ ಸಮಾಧಿ ಸ್ಥಳಾವಾಗಿ ವಿಶ್ವಪ್ರಸಿದ್ಧಿ ಪಡೆದಿದೆ. ಎಲ್ಲ ಸಮುದಾಯಗಳಿಂದ ಪೂಜಿಸಲ್ಪಡುವ ಸಂತ ಸಾಯಿಬಾಬಾ ಇಲ್ಲಿ ಸಮಾಧಿಸ್ಥರಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos