ದೇಶ

ಇರಾಕ್ ನಲ್ಲಿ 39 ಭಾರತೀಯರ ಹತ್ಯೆ: ಮೃತರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ ಪಂಜಾಬ್ ಸರ್ಕಾರ

Manjula VN
ನವದೆಹಲಿ: ಇರಾಕ್'ನಲ್ಲಿ ಇಸಿಸ್ ಉಗ್ರರಿಂದ ಹತ್ಯೆಗೀಡಾಗಿದ್ದ 38 ಭಾರತೀಯರ ಮೃತದೇಹಗಳನ್ನು ಭಾರತಕ್ಕೆ ಕರೆತಲಾಗಿದ್ದು, ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವುದಾಗಿ ಪಂಜಾಬ್ ಸರ್ಕಾರ ಸೋಮವಾರ ಘೋಷಣೆ ಮಾಡಿದೆ. 
ಈ ಕುರಿತಂತೆ ಹೇಳಿಕೆ ನೀಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು, ಹತ್ಯೆಗೀಡಾಗಿರುವ 39 ಭಾರತೀಯರ ಪೈಕಿ 27 ಮಂದಿ ಪಂಜಾಬ್ ಮೂಲದವರಾಗಿದ್ದು, 27 ಮಂದಿಯ ಕುಂಟಬಕ್ಕೂ ರೂ.5 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. 
ಅಲ್ಲದೆ, ಪರಿಹಾರ ಜೊತೆಗೆ ಪ್ರಸ್ತುತ ನೀಡಲಾಗುತ್ತಿರುವ ರೂ.20,000 ಪಿಂಚಣಿ ಕೂಡ ಮುಂದುವರೆಯಲಿದ್ದು, ಮೃತರ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 
ಹತ್ಯೆಗೀಡಾಗಿದ್ದ 38 ಭಾರತೀಯರ ಮೃತದೇಹಗಳನ್ನು ಭಾರತಕ್ಕೆ ತರುವ ಸಲುವಾಗಿ ನಿನ್ನೆಯಷ್ಟೇ ವಿದೇಶಾಂಗ ಖಾತೆಗಳ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರು ಮೊಸುಲ್ ಗೆ ಭೇಟಿ ನೀಡಿದ್ದರು. 
ಮೃತದೇಹಗಳ ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ವಿ.ಕೆ. ಸಿಂಗ್ ಅವರು ಎಲ್ಲಾ 38 ಭಾರತೀಯರ ಮೃತದೇಹಗಳನ್ನು ವಿಮಾನ ಮೂಲಕ ಪಂಜಾಬ್ ರಾಜ್ಯದ ಅಮೃತಸರಕ್ಕೆ ತಂದಿದ್ದಾರೆ.
SCROLL FOR NEXT