ದೇಶ

ಕಾವೇರಿ ವಿವಾದ: ರಾಜೀನಾಮೆ ಸಲ್ಲಿಸಿದ ಎಐಎಡಿಎಂಕೆ ರಾಜ್ಯಸಭಾ ಸಂಸದ

Manjula VN
ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚಿಸದ ಕೇಂದ್ರ ಸರ್ಕಾರದ ವಿರುದ್ಧ ಎಐಎಡಿಎಂಕೆ ನಾಯಕರು ತೀವ್ರವಾಗಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ಎಐಎಡಿಎಂಕೆ ರಾಜ್ಯಸಭಾ ಸಂಸದ ಮುತ್ತುಕರುಪ್ಪನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ. 
ರಾಜ್ಯಸಭಾ ಉಪಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರ ಬಳಿ ಮುತ್ತುಕರುಪ್ಪನ್ ಅವರು ರಾಜಿನಾಮೆ ಸಲ್ಲಿಸಿದ್ದಾರೆಂದು ವರದಿಗಳು ತಿಳಿಸಿವೆ. 
ಮುತ್ತುಕರುಪ್ಪನ್ ಅವರು ಸಲ್ಲಿಸಿರುವ ರಾಜೀನಾಮೆ ಪತ್ರ ಇದೀಗ ಮಾಧ್ಯಮಗಳಿಗೆ ದೊರಕಿದ್ದು, ರಾಜೀನಾಮೆ ಪತ್ರವು ಅಧಿಕೃತವಾಗಿ ಸಲ್ಲಿಸುವ ರಾಜಿನಾಮೆ ಪತ್ರದಂತಿಲ್ಲ ಎನ್ನಲಾಗುತ್ತಿದ್ದು, ರಾಜೀನಾಮೆ ಪತ್ರ ತಿರಸ್ಕಾರಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ರಾಜ್ಯಸಭಾ ಸದಸ್ಯರು ರಾಜೀನಾಮೆ ಸಲ್ಲಿಸುವಾಗ ಸಾಮಾನ್ಯವಾಗಿ ಪತ್ರದಲ್ಲಿ ಒಂದು ಸಾಲಿನ ಕಾರಣ ತಿಳಿಸಿ ರಾಜೀನಾಮೆ ಸಲ್ಲಿಸುವುದು ವಾಡಿಕೆಯಲ್ಲಿದೆ. ಆದರೆ, ಪ್ರಸ್ತುತ ಎಐಎಡಿಎಂಕೆ ಸಂಸದ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿದಿರುವುದಕ್ಕೆ ಸಾಕಷ್ಟು ನೋವಾಗಿದೆ ಎಂದು ಹೇಳಿ ಎರಡು ಪುಟಗಳ ಪತ್ರವನ್ನು ಬರೆದು ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜೀನಾಮೆ ಪತ್ರವು ತಿರಸ್ಕಾರಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 
SCROLL FOR NEXT