ನವದೆಹಲಿ: ದೆಹಲಿಯ ಆರೋಗ್ಯ ಮತ್ತು ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಮತ್ತು ಇತರರ ಮೇಲೆ ದಾಖಲಾಗಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಜೈನ್ ಅವರನ್ನು ಇಂದು ವಿಚಾರಣೆ ನಡೆಸಿದೆ.
ಅಕ್ರಮ ಹಣ ವರ್ಗವಣೆ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ವಿಚಾರಣೆಗಾಗಿ ಜೈನ್ ಅವರನ್ನು ಇಡಿ ಅಧಿಕಾರಿಗಳು ಆಹ್ವಾನಿಸಿದ್ದು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಪ್ರಕರಣ ಸಂಬಂಧ ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ಇಡಿ ಈ ತನಿಖೆ ನಡೆಸಿದೆ. ಜೈನ್ ಅವರು ಪಾಲುದಾರರಾಗಿರುವ ನಾಲ್ಕು ಕಂಪೆನಿಗಳಿಂದ ಪಡೆದ ಹಣದ ಮೂಲವನ್ನು ಅವರು ವಿವರಿಸಲಿಲ್ಲಎಂದು ಸಿಬಿಐ ದೂರಿನಲ್ಲಿ ಹೇಳಿತ್ತು.
ಅಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈನ್ ಹಾಗೂ ಅವರ ಪತ್ನಿ, ಮತ್ತು ಇತರ ನಾಲ್ವರು ವಿರುದ್ಧ ಪ್ರಕರಣ ದಾಖಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics