ರಾಜನಾಥ್ ಸಿಂಗ್ 
ದೇಶ

ಎಸ್ಸಿ / ಎಸ್ಟಿ ಕಾಯಿದೆ ದುರ್ಬಲಗೊಳಿಸುವುದು ಕೇಂದ್ರದ ಉದ್ದೇಶವಲ್ಲ: ರಾಜನಾಥ್ ಸಿಂಗ್

ಹಿಂದುಳಿದ ಸಮುದಾಯಗಳ ಕಳವಳಕ್ಕೆ ಸರ್ಕಾರ ಸೂಕ್ಷಮ್ಮತಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಎಸ್ಸಿ / ಎಸ್ಟಿ (ದುಷ್ಕೃತ್ಯಗಳ ತಡೆಗಟ್ಟುವಿಕೆ) ಕಾಯ್ದೆಯ ದುರ್ಬಲತೆಗೆ.......

ನವದೆಹಲಿ: ಹಿಂದುಳಿದ ಸಮುದಾಯಗಳ ಕಳವಳಕ್ಕೆ ಸರ್ಕಾರ ಸೂಕ್ಷ್ಮಮತಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಎಸ್ಸಿ / ಎಸ್ಟಿ (ದುಷ್ಕೃತ್ಯಗಳ ತಡೆಗಟ್ಟುವಿಕೆ) ಕಾಯ್ದೆಯ ದುರ್ಬಲತೆನಮ್ಮ ಸರ್ಕಾರದ ಉದ್ದೇಶವಲ್ಲ  ಎಂದು ಹೇಳಿದರು.
ನಿನ್ನೆ ನಡೆದ ಭಾರತ್ ಬಂದ್ ವೇಳೆ ಭಾರೀ ಹಿಂಸಾಚಾರ ನಡೆದಿರುವ ಕುರಿತಂತೆ ಸಚಿವರು ಲೀಕಸಭೆಯಲ್ಲಿ ಹೇಳಿಕೆ ನಿಡಿದ್ದಾರೆ.ಮಧ್ಯಪ್ರದೇಶದಲ್ಲಿ ಆರು ಮತ್ತು ಉತ್ತರಪ್ರದೇಶ ಮತ್ತು ರಾಜಸ್ಥಾನ್ಗಳಲ್ಲಿ ತಲಾ ಒಬ್ಬರು ಬದ್ ವೇಳೆ ಸಾವನ್ನಪ್ಪಿದ್ದಾರೆ  ಎಂದು ಗೃಹ ಸಚಿವರು ತಿಳಿಸಿದ್ದು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಗೆ ಬಂದ್ ಸಾಕ್ಷಿಯಾಗಿದೆ ಎಂದರು.
ಎಸ್ಸಿ / ಎಸ್ಟಿ (ದುಷ್ಕೃತ್ಯಗಳ ತಡೆಗಟ್ಟುವಿಕೆ) ಕಾಯ್ದೆಯನ್ನು ದುರ್ಬಲಗೊಳಿಸುವುದು ನಮ್ಮ ಉದ್ದೇಶವಲ್ಲ. ನಾವು ಈ ಕಾನೂನನ್ನು ಬಲಪಡಿಸಲು ನಿರ್ಧರಿಸಿದ್ದೇವೆ.ಎಂದು ಅವರು ಹೇಳಿದರು.
"ಮೀಸಲಾತಿ ವಿಚಾರದಲ್ಲಿ ವ್ಯಾಪಕ ವದಂತಿಗಳು ಹಬ್ಬಿದೆ. ಇವೆಲ್ಲವೂ ಸುಳ್ಳು ಹಾಗೂ ಆಧಾರರಹಿತ. ಎಸ್ಸಿ / ಎಸ್ಟಿ ಸಮುದಾಯದ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ಸಂಪೂರ್ನ ಬದ್ದವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಕುರಿತಂತೆ ಸಾರ್ವಜನಿಕರಿಗೆ ವ್ಯಾಪಕ ಆಕ್ರೋಶವಿದೆ. ಆದರೆ ನಮ್ಮ ಸರ್ಕಾರ ಈ ಸಂಬಂಧ ಯಾವ ಪಕ್ಷವನ್ನು ವಹಿಸುತ್ತಿಲ್ಲ. ಎಂದು ಸಾರ್ವಜನಿಕರಿಗೆ ತಿಳಿಸಲು ನಾನು ಬಯಸುತ್ತೇನೆ" ಅವರು ಹೇಳಿದರು.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳನ್ನು ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯ ಮಾರ್ಚ್ 20 ರಂದು ತೀರ್ಪು ಪ್ರಕಟಿಸಿದ್ದು . ಎಸ್ಸಿ / ಎಸ್ಟಿ  ಕಾಯ್ದೆಯಡಿಯಲ್ಲಿ ಯಾವುದೇ ಸರ್ಕಾರಿ ನೌಕರರನ್ನು ಬಂಧಿಸುವ ಮುನ್ನ ಸೂಕ್ತ ಅಧಿಕಾರಿಗಳು ತನಿಖೆ ನಡೆಸಿದ ಬಳಿಕ ಬಂಧಿಸಬೇಕೆಂದು ತೀರ್ಪು ನೀಡಿತ್ತು. 
ಈ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದ  ಹಲವು ದಲಿತ ಸಂಘಟನೆಗಳು ನಿನ್ನೆ 'ಭಾರತ್ ಬಂದ್' ಗೆ ಕರೆ ನೀಡಿದ್ದವು. ಬಂದ್ ವೇಳೆ ನಡೆದ ಹಿಂಸಾಚಾರದಲ್ಲಿ ಒಟ್ಟು ಒಂಭತ್ತು ಮಂದಿ ಹತರಾಗಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT