5 ವರ್ಷಗಳಲ್ಲಿ ಭಾರತ ಮತ್ತೊಂದು ಸಿಲಿಕಾನ್ ವ್ಯಾಲಿಯಾಗಬಹುದು: ವಿಶ್ವ ಬ್ಯಾಂಕ್
ಹೊಸತನ್ನು ಅನ್ವೇಷಿಸುವ ಪರಿಸರವನ್ನು ಉತ್ತೇಜಿಸಿದರೆ ಭಾರತಕ್ಕೆ ಕೇವಲ 5 ವರ್ಷಗಳಲ್ಲಿ ಮತ್ತೊಂದು ಸಿಲಿಕಾನ್ ವ್ಯಾಲಿಯಾಗುವ ಸಾಮರ್ಥ್ಯವಿದೆ ಎಂದು ವಿಶ್ವ ವ್ಯಾಂಕ್ ಹೇಳಿದೆ.
ನವದೆಹಲಿ: ಹೊಸತನ್ನು ಅನ್ವೇಷಿಸುವ ಪರಿಸರವನ್ನು ಉತ್ತೇಜಿಸಿದರೆ ಭಾರತಕ್ಕೆ ಕೇವಲ 5 ವರ್ಷಗಳಲ್ಲಿ ಮತ್ತೊಂದು ಸಿಲಿಕಾನ್ ವ್ಯಾಲಿಯಾಗುವ ಸಾಮರ್ಥ್ಯವಿದೆ ಎಂದು ವಿಶ್ವ ವ್ಯಾಂಕ್ ಹೇಳಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅನ್ವೇಷಣೆಗಳು ನಡೆಯುತ್ತಿರುವುದರ ಬಗ್ಗೆ ವರದಿಯನ್ನು ಪ್ರಕಟಿಸಿರುವ ವಿಶ್ವ ಬ್ಯಾಂಕ್ ನ ಭಾರತೀಯ ಮುಖ್ಯಸ್ಥ ಜುನೈದ್ ಕಮಲ್ ಅಹ್ಮದ್, ಪ್ರಪಂಚ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಮುಂದಿನ 5 ವರ್ಷಗಳಲ್ಲಿ ನಾವು ಭಾರತದಲ್ಲಿ ಮತ್ತೊಂದು ಸಿಲಿಕಾನ್ ವ್ಯಾಲಿಯನ್ನು ನೋಡಬಹುದು ಎಂದು ಹೇಳಿದ್ದಾರೆ.
ಭಾರತದಲ್ಲಿ ಸಂಸ್ಥೆಗಳು ನಿಂತಲ್ಲೇ ನಿಂತಿದ್ದು, ಅನ್ವೇಷಣೆಯ ಪರಿಸರವನ್ನು ಉತ್ತೇಜಿಸುವ ಅಗತ್ಯವಿದೆ, ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ರಾಷ್ಟ್ರೀಯ ಇನ್ನೋವೇಷನ್ ವ್ಯವಸ್ಥೆ ವಿಸ್ತಾರಗೊಳ್ಳಬೇಕಿದೆ ಎಂದೂ ಜುನೈದ್ ಕಮಲ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.