650 ಕೋಟಿ ರೂ. ವಂಚಿಸಿದ ಕಂಪನಿಯೊಂದಿಗೆ ಪಿಯೂಶ್ ಗೋಯಲ್ ನಂಟು: ರಾಹುಲ್ ಗಾಂಧಿ
ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಬಾರಿ...
ನವದೆಹಲಿ: ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಬಾರಿ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ.
650 ಕೋಟಿ ಸುಸ್ತಿದಾರ ಕಂಪನಿಯೊಂದಿಗೆ ಪಿಯೂಶ್ ಗೋಯಲ್ ಅವರು ನಂಟು ಹೊಂದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜೈ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪುತ್ರ ಶೌರ್ಯ ದೋವಲ್ ಮತ್ತು ನೀರವ್ ಮೋದಿ ಹೆಸರು ಉಲ್ಲೇಖಿಸಿದ್ದಾರೆ.
'ಶಹ-ಜಾದ್ ನಂತರ, ಶೌರ್ಯ-ಗಾತ ಮತ್ತು ಛೋಟೆ ಮೋದಿ ನಂತರ ಬಿಜೆಪಿ ಶಿರಿಡಿ ಕಾ ಚಮತ್ಕಾರ್' ಪ್ರಸ್ತೂತಪಡಿಸುತ್ತಿದೆ ಎಂದು ರಾಹುಲ್ ಗಾಂಧಿ ವ್ಯಂಗವಾಗಿ ಟ್ವೀಟ್ ಮಾಡಿದ್ದಾರೆ.
650 ಕೋಟಿ ರುಪಾಯಿ ವಂಚಿಸಿರುವ ಶಿರಡಿ ಎಂಬ ಕಂಪನಿಯೊಂದಿಗೆ ಪಿಯೂಶ್ ಗೋಯಲ್ ಅವರು ನಂಟು ಹೊಂದಿದ್ದಾರೆ ಎಂಬ ಮಾಧ್ಯಮ ವರದಿಯನ್ನು ರಾಹುಲ್ ಗಾಂಧಿ ಲಗತ್ತಿಸಿದ್ದಾರೆ.