ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
ನವದೆಹಲಿ: ಬಿಜೆಪಿ ಆಡಳಿತ ನಡೆಸದ ರಾಜ್ಯಗಳಿಗೆ ಎನ್'ಡಿಎ ಸರ್ಕಾರ ಅನ್ಯಾಯ ಮಾಡುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹೋರಾಡಲು ಸ್ಥಳೀಯ ಪಕ್ಷಗಳು ಟಿಡಿಪಿ ಜೊತೆಗೆ ಕೈಜೋಡಿಸಬೇಕೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ.
ಎನ್'ಡಿಎ ಜೊತೆಗಿನ ಮೈತ್ರಿ ಮುರಿದ ಬಳಿಕ ಇದೇ ಮೊದಲ ಬಾರಿಗೆ ರಾಜಧಾನಿ ನವದೆಹಲಿಗೆ ಭೇಟಿ ನೀಡಿರುವ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ನನ್ನ ಮೊದಲ ಆದ್ಯತೆ ಏನಿದ್ದರೂ ನನ್ನ ರಾಜ್ಯ. ನಮ್ಮ ಆಗ್ರಹಗಳನ್ನು ನಿರ್ಲಕ್ಷ್ಯ ಮಾಡಿದ್ದ ಕಾರಣಕ್ಕೆ ನಾವು ಎನ್'ಡಿಎ ಪಕ್ಷದೊಂದಿಗಿನ ಮೈತ್ರಿಯಿಂದ ಹೊರ ಬಂದಿದ್ದೆವು. ಬಿಜೆಪಿ ಆಡಳಿತ ರಾಜ್ಯಗಳಿಗೆ ಎನ್'ಡಿಎ ಅನ್ಯಾಯ ಮಾಡುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹೋರಾಡಲು ಸ್ಥಳೀಯ ಪಕ್ಷಗಳು ಟಿಡಿಪಿ ಜೊತೆಗೆ ಕೈಜೋಡಿಸಬೇಕೆಂದು ಹೇಳಿದ್ದಾರೆ.
ನವದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾಯ್ಡು ಅವರು ಹೇಮಮಾಲಿನಿ ಮತ್ತು ಜಯಂತ್ ಸಿನ್ಹಾ ಅವರೊಂದಿಗೆ ಚರ್ಚೆ ನಡೆಸಿದರು. ಮೋದಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಇತರೆ ಸ್ಥಳೀಯ ಪಕ್ಷಗಳು ಟಿಡಿಪಿ ಜೊತೆಗೆ ಕೈಜೋಡಿಸಬೇಕೆಂದು ಹೇಳಿದ್ದಾರೆ.
ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನ ನೀಡುವಂತೆ ನಾನು ಭಿಕ್ಷೆ ಬೇಡುವುದಿಲ್ಲ ಎಂದು ತಮ್ಮ ಸಂಸದರೊಂದಿಗೆ ನಾಯ್ಡು ಅವರು ಹೇಳಿಕೊಂಡಿದ್ದು, ಟಿಡಿಪಿ ಎನ್'ಡಿಎ ಪಕ್ಷದೊಂದಿದೆ ಸಂಧಾನ ಮಾತುಕತೆ ನಡೆಸುವ ಅವಕಾಶಗಳಿವೆ ಎಂದು ಟಿಡಿಪಿ ಮೂಲಗಳು ಮಾಹಿತಿ ನೀಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics