ದೇಶ

ಏ.05 ರಂದು ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪು: ಜೋಧ್ ಪುರಕ್ಕೆ ತಲುಪಿದ ಸಲ್ಮಾನ್ ಮತ್ತಿತರರು

Srinivas Rao BV
ಜೋಧ್ ಪುರ: ಏ.05 ರಂದು ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪು ಏ.05 ಕ್ಕೆ ಪ್ರಕಟವಾಗಲಿದ್ದು ಜೋಧ್ ಪುರಕ್ಕೆ ಆರೋಪಿಗಳಾದ ಸಲ್ಮಾನ್ ಖಾನ್ ಹಾಗೂ ಮತ್ತಿತರರು ಆಗಮಿಸಿದ್ದಾರೆ. 
ಮಾ.28 ರಂದು ಪ್ರಕರಣದ ಅಂತಿಮ ಹಂತದ ವಿಚಾರಣೆ ಪೂರ್ಣಗೊಂಡಿದ್ದು, ಮುಖ್ಯ ನ್ಯಾಯಾಧೀಶರಾದ ದೇವ್ ಕುಮಾರ್ ಖತ್ರಿ ಆದೇಶವನ್ನು ಕಾಯ್ದಿರಿಸಿದ್ದಾರೆ. ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ತಬು, ಸೋನಾಲಿ ಬೇಂದ್ರೆ, ನೀಲಮ್ ಪ್ರಕರಣದ ಆರೋಪಿಗಳಾಗಿದ್ದಾರೆ. 
1998 ರ ಅಕ್ಟೋಬರ್ 1-2 ರಂದು ಹಮ್ ಸಾಥ್ ಸಾಥ್ ಹೈ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಸಲ್ಮಾನ್ ಜೋಧ್ ಪುರದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು ಎಂಬ ಆರೋಪವಿದ್ದು, ಸಲ್ಮಾನ್ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 51 ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದ ವೇಳೆ ಸಲ್ಮಾನ್ ಚಾಲನೆ ಮಾಡುತ್ತಿದ್ದ ವಾಹನದಲ್ಲಿ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ತಬು, ಸೋನಾಲಿ ಬೇಂದ್ರೆ, ನೀಲಮ್ ಕೂಡ ಇದ್ದರು.
SCROLL FOR NEXT