ದೇಶ

ದೆಹಲಿಯಲ್ಲಿ ಭಾರಿ ಧೂಳು, ಮಳೆ, 24 ವಿಮಾನಗಳ ಮಾರ್ಗ ಬದಲಾವಣೆ

Lingaraj Badiger
ನವದೆಹಲಿ: ದೆಹಲಿಯಲ್ಲಿ ಶುಕ್ರವಾರ ಸಂಜೆ ದಿಢೀರ್ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದ್ದು, ರಾಷ್ಟ್ರ ರಾಜಧಾನಿ ಸಂಪೂರ್ಣ ಧೂಳುಮಯವಾಗಿದೆ.
ಬಿರುಗಾಳಿ ಸಹಿತ ಭಾರಿ ಮಳೆ ಹಾಗೂ ಧೂಳು ಆವರಿಸಿಕೊಂಡಿದ್ದರಿಂದ ದೆಹಲಿಗೆ ಆಗಮಿಸಬೇಕಿದ್ದ 24 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಹಲವು ವಿಮಾನಗಳ ಸಂಚಾರ ವಿಳಂಬವಾಗಿದೆ. 
ಧೂಳಿನಿಂದಾಗಿ ರಸ್ತೆ ಸಂಚಾರಕ್ಕೂ ಭಾರಿ ತೊಂದರೆ ಉಂಟಾಗಿದ್ದು, ವಾಹನ ಸವಾರರಿಗೆ, ಪಾದಚಾರಿಗಳು ಸಹ ಪರದಾಡುವಂತಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ರೈಸಿನಾ ಹಿಲ್‌ ಕಾಂಪ್ಲೆಕ್ಸ್, ಸಂಸತ್‌ ಭವನದ ಆಸುಪಾಸಿನ ಸರ್ಕಾರ ಕಟ್ಟಡಗಳೂ ಧೂಳುಮಯವಾಗಿವೆ.
ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳದಿಂದ ತತ್ತರಿಸಿದ್ದ ದೆಹಲಿ ನಾಗರಿಕರಿಗೆ ಈ ಹವಾಮಾನ ಬದಲಾವಣೆ ತುಸು ನೆಮ್ಮದಿ ತಂದಿದ್ದರೂ ಧೂಳುಮಯವಾಗಿರುವುದು ಮತ್ತೊಂದು ಸಮಸ್ಯೆ ಎದುರಿಸುವಂತಾಗಿದೆ.
ಕಳೆದ ಗುರುವಾರವೇ ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕೆಲವು ದಿನಗಳಿಂದ ದೆಹಲಿಯ ತಾಪಮಾನ 36 ಡಿಗ್ರಿ ಆಸುಪಾಸಿನಲ್ಲಿತ್ತು.
SCROLL FOR NEXT