ದೇಶ

ರಕ್ಷಣಾ ಇಲಾಖೆ ವೆಬ್ ಸೈಟ್ ಮೇಲೆ ಸೈಬರ್ ದಾಳಿಯಾಗಿಲ್ಲ: ಎನ್ಐಸಿ ಸ್ಪಷ್ಟನೆ

Raghavendra Adiga
ನವದೆಹಲಿ: ರಕ್ಷಣಾ ಮತ್ತು ಗೃಹ ಸಚಿವಾಲಯ ಸೇರಿ ಯಾವ ಸಚಿವಾಲಯದ ವೆಬ್ ಸೈಟ್ ಗಳೂ ಸೈಬರ್ ದಾಳಿಗೆ ಒಳಗಾಗಿರಲಿಲ್ಲ. ಕೆಲವು ತಾಂತ್ರಿಕ ದೋಷಗಳ ಕಾರಣದಿಂಡ ಇಂದು ಮದ್ಯಾಹ್ನ 2:30 ರಿಂದಲೂ ವೆಬ್ ಸೈಟ್ ಕಾರ್ಯಾಚರಣೆಯಲ್ಲಿರಲಿಲ್ಲ ಎಂದು ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕ ಗುಲ್ಶನ್ ರೈ ಹೇಳಿದ್ದಾರೆ.
ಸ್ಟೋರೇಜ್ ಏರಿಯಾ ನೆಟ್ ವರ್ಕಿಂಗ್ ಸಿಸ್ಟಮ್ ವಿಫಲವಾಗಿದ್ದ ಕಾರಣದಿಂದ ರಕ್ಷಣ ಇಲಾಖೆ ವೆಬ್ ಸೈಟ್ ಸ್ಥಗಿತಗೊಂಡಿತ್ತು ಎಂದು ಅವರು ಹೇಳಿದ್ದಾರೆ.
ಇದೊಂದು ಹಾರ್ಡ್ ವೇರ್ ವೈಫಲ್ಯವಷ್ಟೇ ಆಗಿತ್ತು ಹೊರತು ಯಾವುದೇ ಸೈಬರ್ ದಾಳಿ ಸಂಭವಿಸಿರಲಿಲ್ಲ. ಎಂದು 1998 ರಿಂದಲೂ ಸೈಬರ್ ಸುರಕ್ಷತೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈ ಹೇಳಿದ್ದಾರೆ.
ರಕ್ಷಣೆ,  ಗೃಹ, ಕಾನೂನು, ಕಾರ್ಮಿಕ ಇಲಾಖೆ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳ ವೆಬ್ ಸೈಟ್ ಗಳನ್ನು ನ್ಯಾಷನಲ್ ಇನ್ಫೋಮ್ಯಾಟಿಕ್ಸ್ ಸೆಂಟರ್ ನಿರ್ವಹಿಸುತ್ತಿದೆ. ಇಂದು ಸಂಭವಿಸಿದ ತಾಂತ್ರಿಕ ತೊಂದರೆಯಿಂದಾಗಿ ಈ ಎಲ್ಲಾ ವೆಬ್ ಸೈಟ್ ಗಳೂ  ಸ್ಥಗಿತವಾಗಿದ್ದವು. ಇದೀಗ ಹಾರ್ಡ್ ವೇರ್ ಗಳನ್ನು ಬದಲಾಯಿಸಲಾಗುತ್ತಿದ್ದು ಸಮಸ್ಯೆ ಶೀಘ್ರದಲ್ಲಿಯೇ ಸರಿಹೋಗಲಿದೆ ಎಂದು ರೈ ಹೀಳಿದ್ದಾರೆ.
ಇದಕ್ಕೂ ಮುನ್ನ ರಕ್ಷನಾ ಸಚಿವರಾದ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದು ಇಲಾಖೆಯ ವೆಬ್ ಸೈಟ್ ಶೀಘ್ರವಾಗಿ ಪುನಾರಂಭಗೊಳ್ಳಲಿದೆ. ಭವಿಷ್ಯದಲ್ಲಿ ಅಂತಹ ಯಾವುದೇ ಅಡ್ಡಿಯಾಗದಂತೆ ಅಗತ್ಯವಾದ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗುತ್ತದೆ ಎಂದಿದ್ದರು. 
SCROLL FOR NEXT