ದೇಶ

ನವೆಂಬರ್14ನ್ನು ಮಕ್ಕಳ ದಿನಾಚರಣೆ ಬದಲಿಗೆ ಅಂಕಲ್ ಡೇ ಎಂದು ಆಚರಿಸಿ: ಬಿಜೆಪಿ ಸಂಸದರಿಂದ ಪ್ರಧಾನಿಗೆ ಪತ್ರ

Sumana Upadhyaya

ನವದೆಹಲಿ; ಮಕ್ಕಳ ದಿನಾಚರಣೆಯಿಂದ ಪಂಡಿತ್ ಜವಹರಲಾಲ್ ನೆಹರೂರವರ ಹೆಸರನ್ನು ಅಳಿಸಲು ಸುಮಾರು 100 ಬಿಜೆಪಿ ಸಂಸದರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು ಡಿಸೆಂಬರ್ 26ನ್ನು ಮಕ್ಕಳ ದಿನವನ್ನಾಗಿ ಆಚರಿಸಬೇಕೆಂದು ಕೋರಿದ್ದಾರೆ.

ನವೆಂಬರ್ 14ರಂದು ನೆಹರೂರವರಿಗೆ ಮಕ್ಕಳ ಮೇಲಿದ್ದ ಪ್ರೀತಿಯ ಬಗ್ಗೆ ಸಾರಲು ಮಕ್ಕಳ ದಿನಾಚರಣೆಯೆಂದು ಆಚರಿಸಲಾಗುತ್ತದೆಯೇ ಹೊರತು ಮಕ್ಕಳ ಅಭಿವೃದ್ಧಿ ಬಗ್ಗೆ ಅರಿವು ಮೂಡಿಸಲು ಅಲ್ಲ. ಗುರು ಗೋವಿಂದ ಸಿಂಗ್ ಅವರ ಅಪ್ರಾಪ್ತ ಮಕ್ಕಳಾದ ಶಾಹಿಬ್ಜಾದ ಅಜಿತ್ ಸಿಂಗ್, ಜುಜ್ಹರ್ ಸಿಂಗ್, ಜೋವರ್ ಸಿಂಗ್ ಮತ್ತು ಫತೇಹ್ ಸಿಂಗ್ ಅವರು ಮೊಗಲರ ವಿರುದ್ಧ ಹೋರಾಟ ನಡೆಸಿ ತ್ಯಾಗ ಮಾಡಿದ್ದರ ಸಂಕೇತವಾಗಿ ಮಕ್ಕಳ ದಿನ ಆಚರಿಸಬೇಕು.
 
ನವೆಂಬರ್ 14ನ್ನು ಅಂಕಲ್ ಡೇ ಅಥವಾ ಚಾಚಾ ದಿವಸ ಎಂದು ಆಚರಿಸಬೇಕೆಂದು ಪ್ರಧಾನಿ ಮೋದಿಗೆ ಒತ್ತಾಯಿಸಿ ಪತ್ರ ಬರೆದಿದ್ದಾರೆ.

ಡಿಸೆಂಬರ್ 26ರಂದು ಛೋಟೆ ಸಾಹಿಬ್ಜಾದ್ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಹುತಾತ್ಮರಾಗಿದ್ದು ಅವರ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಬೇಕು. ತಮ್ಮ ಧೈರ್ಯ, ಸಾಹಸ ಮತ್ತು ಹಕ್ಕುಗಳಿಗಾಗಿ ಹೋರಾಡುವ ಬಗ್ಗೆ ಮಕ್ಕಳಲ್ಲಿ ನೆನಪು ಮಾಡಿಕೊಳ್ಳಲು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಪ್ರಧಾನಿಗೆ ಬರೆದಿರುವ ಪತ್ರಕ್ಕೆ 100 ಮಂದಿ ಬಿಜೆಪಿ ಸಂಸದರು ಸಹಿ ಹಾಕಿದ್ದಾರೆ.

SCROLL FOR NEXT