ದೇಶ

ರೈಲು ಮತ್ತು ರೈಲು ನಿಲ್ದಾಣಗಳ ಕೇಟರಿಂಗ್ ಸೇವೆ ಮೇಲೆ ಶೇ.5ರಷ್ಟು ಜಿಎಸ್ ಟಿ

Lingaraj Badiger
ನವದೆಹಲಿ: ಭಾರತೀಯ ರೈಲ್ವೆ ಅಥವಾ ಐಆರ್ ಸಿಟಿಸಿ ರೈಲು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ವಿತರಿಸುವ ಆಹಾರ ಮತ್ತು ಪಾನಿಯಗಳ ಮೇಲೆ ಶೇ.5ರಷ್ಟು ಜಿಎಸ್ ಟಿ ವಿಧಿಸಲಾಗುವುದು ಎಂದು ಶುಕ್ರವಾರ ಹಣಕಾಸು ಸಚಿವಾಲಯ ತಿಳಿಸಿದೆ.
ಈ ಸಂಬಂಧ ಹಣಕಾಸು ಸಚಿವಾಲಯ ಮಾರ್ಚ್ 31ರಂದು ರೈಲ್ವೆ ಮಂಡಳಿಗೆ ಪತ್ರ ಬರೆದಿದ್ದು, ರೈಲ್ವೆ ಕೇಟರಿಂಗ್ ಸೇವೆ ಮೇಲೆ ಶೇ,5ರಷ್ಟು ಜಿಎಸ್ ವಿಧಿಸುವುದಾಗಿ ಸ್ಪಷ್ಟಪಡಿಸಿದೆ.
2017, ಜುಲೈ 1ರಂದು ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಿದ್ದು, ಹಲವು ಬಾರಿ ವಿವಿಧ ವಸ್ತುಗಳ ಮೇಲಿನ ಜಿಎಸ್ ಟಿಯನ್ನು ಪರಿಷ್ಕರಿಸಲಾಗಿದೆ. 
SCROLL FOR NEXT