ದೇಶ

ಪ್ರಧಾನಿ ಮೋದಿ ಕುರಿತು ಹೇಳಿಕೆ; ಜಿಗ್ನೇಶ್ ಮೇವಾನಿ ವಿರುದ್ಧ ಪ್ರಕರಣ ದಾಖಲು

Manjula VN
ಚಿತ್ರದುರ್ಗ; ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಗುಜರಾತ್ ರಾಜ್ಯದ ವಡಗಾಂ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಶನಿವಾರ ತಿಳಿತುಬಂದಿದೆ. 
ಉದ್ದೇಶಪೂರ್ವಕವಾಗಿ ದ್ವೇಷ ಭಾವನೆ ಮೂಡುವಂತೆ ಪ್ರಚೋದನಕಾರಿ ಹೇಳಿಕೆ ನೀಡಿ ಗಲಬೆ ಸೃಷ್ಟಿಸಲು ಮೇವಾನಿಯವರು ಮುಂದಾಗಿದ್ದಾರೆಂದು ಆರೋಪಿಸಿ ಜಯಂತ್ ಎಂಬುವವರು ಚಿತ್ರದುರ್ಗ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ವರದಿಗಳು ತಿಳಿಸಿವೆ. 
ಚುನಾವಣೆಯ ನಿಬಂಧನೆಗಳಿಗೆ ಒಳಪಡಿಸಿ ಸಂವಾದ ನಡೆಸುವಂತೆ ಅನುಮತಿ ನೀಡಲಾಗಿತ್ತು. ಆದರೆ, ಆ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ. ಆದ ಕಾರಣ ಕಾರ್ಯಕ್ರಮ ಆಯೋಜನೆಗೆ ಕಾರಣರಾದ ಕೋಮು ಸೌಹಾರ್ದ ವೇದಿಕೆಯ ಟಿ.ಷಫಿವುಲ್ಲಾ ವಿರುದ್ಧ ಕೂಡ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. 
ಪ್ರಸ್ತುತ ಮೇವಾನಿ ವಿರುದ್ಧ ಭಾರತೀಯ ದಂಡ ಸಂಹಿತೆ 153, 188, 117 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ  ಎಂದು ತಿಳಿದುಬಂದಿದೆ. 
ಚಿತ್ರದುರ್ಗ ಕಾರ್ಯಕ್ರಮವೊಂದರಲ್ಲಿ ನಿನ್ನೆಯಷ್ಟೇ ಮಾತನಾಡಿದ್ದ ಮೇವಾನಿಯವರು, ಯುವಕರ ಪಾತ್ರ ಅತ್ಯಂತ ಪ್ರಮುಖವಾದದ್ದು. ಏ.15ರಂದು ಮೋದಿಯವರು ಬೆಂಗಳೂರಿಗೆ ಬಂದಾಗ ಸಭೆಯನ್ನು ಧ್ವಂಸಗೊಳಿಸಿ. ಕುರ್ಚಿಗಳನ್ನು ಎಸೆಯಿರಿ. ಪ್ರತೀವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದಿರಿ ಏನಾಯಿತು ಎಂದು ಪ್ರಶ್ನಿಸಿ. ಉತ್ತರ ಕೊಡುವಲ್ಲಿ ಮೋದಿ ವಿಫಲವಾದರೆ, ಹಿಮಾಲಯದಲ್ಲಿ ಹೋಗಿ ಮಲಗಲು ಹೇಳಿ ಇಲ್ಲವೇ ರಾಮ ಮಂದಿನರದಲ್ಲಿ ಗಂಟೆ ಹೊಡೆಯುವುದಕ್ಕೆ ಹೇಳಿ ಎಂದು ತಿಳಿಸಿದ್ದರು. 
SCROLL FOR NEXT