ಕುಮಾರ್ ವಿಶ್ವಾಸ್ 
ದೇಶ

ಅರುಣ್ ಜೇಟ್ಲಿಗೆ ಅನಾರೋಗ್ಯ: ಡಿಡಿಸಿಎ ಪ್ರಕರಣದಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ

ಎಎಪಿ ಸಚಿವರ ವಿರುದ್ಧ ಬಿಜೆಪಿ ನಾಯಕ ಅರುಣ್ ಜೇಟ್ಲಿ ಹೂಡಿದ್ದ ಕ್ರಿಮಿನಲ್ ಮಾನನಷ್ಟಪ್ರಕರಣ ಸಂಬಂಧ ಜೇಟ್ಲಿ ಮತ್ತು ಎಎಪಿ ನಾಯಕ ಕುಮಾರ್ ವಿಶ್ವಾಸ್ ಅವರಿಗೆ ದಿನದ ಮಟ್ಟಿಗೆ ವೈಯಕ್ತಿಕ...........

ನವದೆಹಲಿ: ಎಎಪಿ ಸಚಿವರ ವಿರುದ್ಧ ಬಿಜೆಪಿ ನಾಯಕ ಅರುಣ್ ಜೇಟ್ಲಿ ಹೂಡಿದ್ದ ಕ್ರಿಮಿನಲ್ ಮಾನನಷ್ಟಪ್ರಕರಣ ಸಂಬಂಧ ಜೇಟ್ಲಿ ಮತ್ತು ಎಎಪಿ ನಾಯಕ ಕುಮಾರ್ ವಿಶ್ವಾಸ್ ಅವರಿಗೆ ದಿನದ ಮಟ್ಟಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿ ದೆಹಲಿ ನ್ಯಾಯಾಲಯ ಆದೇಶ ನೀಡಿದೆ.
ಪ್ರಕರಣದ ಇತರೆ ಆರೋಪಿಗಳಾದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ಶಾಸಕರಾದ ರಾಘವ್ ಚಧಾ, ಸಂಜಯ್ ಸಿಂಗ್, ಅಶುತೋಷ್ ಮತ್ತು ದೀಪಕ್ ಬಾಜ್ಪೈ  ಅವರುಗಳನ್ನು ನ್ಯಾಯಾಲಯ ಈ ಹಿಂದೆಯೇ ಖುಲಾಸೆಗೊಳಿಸಿತ್ತು. ಡಿಡಿಸಿಎ ಅಕ್ರಮದ ವಿರುದ್ಧ ಆರೋಪಿಸಿ ಮಾಡಿದ್ದ ಟೀಕೆಗಳಿಗೆ ಕೇಜ್ರಿವಾಲ್, ಜೇಟ್ಲಿ ಅವರ ಕ್ಷಮೆ ಕೇಳಿದ ಕಾರಣ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು.
ಅರುಣ್ ಜೇಟ್ಲಿಯವರು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದು  ಇಂದು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಜೇಟ್ಲಿ ಪರ ವಕೀಲರಾದ ಮಾಣಿಕ್ ದೋಗ್ರಾ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮಾರ್ ವಿಶಾಲ್ ಜೇಟ್ಲಿ ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ್ದಾರೆ.
ಇದೇ ವೇಳೆ ಕುಮಾರ್ ವಿಶ್ವಾಸ್ ಪರ ವಕೀಲರಾದ ಮೊಹದ್ ಇರ್ಶಾದ್ಸಹ ವಿಶ್ವಾಸ್ ಅವರ ಖುದ್ದು ಹಾಜರಾತಿಗೆ ಒಂದು ದಿನದ ವಿನಾಯಿತಿ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ನ್ಯಾಯಾಲಯವು ಎರಡೂ ಅರ್ಜಿಯನ್ನು ಸ್ವೀಕರಿಸಿದ್ದು ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 11ಕ್ಕೆ ಮುಂದೂಡಿದೆ.
ಎಎಪಿ ಶಾಸಕರು ತನ್ನ ವಿರುದ್ಧ  "ಸುಳ್ಳು, ಹಗರಣ ಮತ್ತು ಮಾನನಷ್ಟ"ದ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಅರುಣ್ ಜೇಟ್ಲಿ ಕೇಜ್ರಿವಾಲ್ ಸೇರಿದಂತೆ ಹಲವು ಶಾಸಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದರ ಸಂಬಂಧ ಕುಮಾರ್ ವಿಶ್ವಾಸ್ ಹೊರತಾಗಿ ಉಳಿದ ಶಾಸಕರು, ಮುಖ್ಯಮಂತ್ರಿ ಕೇಜ್ರಿವಾಲ್ ತಾವು ಜೇಟ್ಲಿಯವರ ಕ್ಷಮೆ ಕೇಳಿದ್ದ ಕಾರಣ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು. 
ಕುಮಾರ್ ವಿಶ್ವಾಸ್ ಕ್ಷಮೆಯಾಚಿಸಿಲ್ಲದ ಕಾರಣ ಅವರ ವಿರುದ್ಧದ ವಿಚಾರಣೆ ಮುಂದುವರಿಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT