ದೇಶ

ಕರ್ನಾಟಕದ ಬಳಿಕ ಮಹಾರಾಷ್ಟ್ರ ಲಿಂಗಾಯತರಿಂದ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಪಟ್ಟು

Raghavendra Adiga
ಔರಂಗಾಬಾದ್(ಮಹಾರಾಷ್ಟ್ರ): ಲಿಂಗಾಯತಸಮುದಾಯಕ್ಕೆ ಸಂವಿಧಾನಿಕ ಮಾನ್ಯತೆ ನಿಡಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಲಿಂಗಯಾಟ್ ಕೋ-ಆರ್ಡಿನೇಶನ್ ಸಮಿತಿಯು ಭಾನುವಾರ ಮಹಾರಾಷ್ಟ್ರದ ಔರಂಗಾಬಾದ್ ವಿಬಾಗೀಯ ಆಯುಕ್ತರ ಕಛೇರಿ ಎದುರು ಪ್ರತಿಭಟನಾ ರ್ಯಾಲಿ ನಡೆಸಿದೆ.
ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಲಾಗಿದೆ.
103 ವರ್ಷದ ಶಿವಲಿಂಗ ಶಿವಾಚಾರ್ಯ ಮಹಾರಾಜ ನೇತೃತ್ವದ ಲಿಂಗಾಯತ ಮಹಾಮೋರ್ಚಾ ಜತೆಗೆ ಹಲವಾರು ರಾಜ್ಯಗಳಿಂದ ಆಗಮಿಸಿದ್ದ ಧಾರ್ಮಿಕ ಮುಖಂಡರು ಈ ರ್ಯಾಲಿಯಲ್ಲಿ ಭಾಗವಹಿಸಿದ್ದರು.
"ಲಿಂಗಾಯತ ಧರ್ಮಕ್ಕೆ ಸರ್ಕಾರ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ" ಎಂದು ಶಿವಲಿಂಗ ಶಿವಾಚಾರ್ಯ ಮಹಾರಾಜ ಹೇಳಿದ್ದಾರೆ. ಲಿಂಗಾಯತ ಧರ್ಮ ಭಾರತದ ಪುರಾತನ ಧರ್ಮಗಳಲ್ಲಿ ಒಂದು, ಮಹಾರಾಷ್ಟ್ರದಲ್ಲಿ ಈ ಧರ್ಮದ ಸುಮಾರು 4 ಕೋಟಿ ಅನುಯಾಯಿಗಳಿದ್ದಾರೆ ಎಂದು ಅವರು ಹೇಳಿದರು.
ಲಿಂಗಾಯತ ಸಹಕಾರ ಸಮಿತಿಯ ರಾಷ್ಟ್ರೀಯ ಸಂಚಾಲಕ ಅವಿನಾಶ್ ಭೋಸಿಕಾರ್, ಜಿಲ್ಲಾ ಸಹರಾಕ್ರಿ ಸಂಚಾಲಕ ಪ್ರದೀಪ್ ಬರಾಂಡೇ, ನಗರದ ಮುಖ್ಯಸ್ಥರಾದ ದೈನೇಶ್ವರ್ ಖಂಡ್ರೆ ಅಪ್ಪಾ ಇತರ ರಾಜಕೀಯ ಪಕ್ಷಗಳ ನಾಯಕರು ಸಹ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಈ ಬಳಿಕ ನಿಯೋಗವು ವಿಷನಲ್ ಕಮಿಷನರ್, ಡಾ. ಪುರುಷೋತ್ತಮ್ ಭಪಕರ್ ಅವರಿಗೆ ತಮ್ಮ ಮನವಿ ಪತ್ರವನ್ನು ಸಲ್ಲಿಸಿದೆ.
ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಚ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ರಚನೆಯಾಗಿದ್ದ ಏಳು ಸದಸ್ಯರ ಸಮಿತಿಯು ಮಾರ್ಚ್ 2, 2018 ರಂದು ತನ್ನ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ್ದು "ಕರ್ನಾಟಕದಲ್ಲಿ ಲಿಂಗಾಯತರನ್ನು ಧಾರ್ಮಿಕ ಅಲ್ಪಸಂಖ್ಯಾತರಾಗಿ ಪರಿಗಣಿಸಬಹುದು" ಎಂದು ತಿಳಿಸಿತ್ತು.
ಇದಾಗಿ ಮಾ.23 ರಂದು ಅವಿನಾಶ್ ಭೋಸಿಕಾರ್ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಸ್ಥಾನಮಾನಕ್ಕಾಗಿ ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಬೇಕೆಂದು ಹೇಳಿದ್ದರು. 
SCROLL FOR NEXT