ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಜೆ ಚೆಲಮೇಶ್ವರ್
ನವದೆಹಲಿ: ದೋಷಾರೋಪಣೆಯು ಪ್ರತಿಯೊಂದು ಸಮಸ್ಯೆಗೆ ಉತ್ತರವಾಗುವುದಿಲ್ಲ. ನ್ಯಾಯಾಂಗ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ವಿರುದ್ಧ ಪ್ರತಿಭಟನೆ ದಾಖಲಿಸಿ ವಿವಾದ ಸೃಷ್ಟಿಸಿದ್ದ ನ್ಯಾಯಮೂರ್ತಿ ಜೆ ಚೆಲಮೇಶ್ವರ್,ಹೇಳಿದ್ದಾರೆ.
ಜನವರಿ 12ದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್ ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್, ಮದನ್ ಬಿ.ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರೊಡನೆ ಪತ್ರಿಕಾಗೋಷ್ಥಿ ನಡೆಸಿ ನ್ಯಾಯಾಲಯದೊಳಗೆ ಅನೇಕ ಸಮಸ್ಯೆಗಳಿದೆ, ಇದು ದೇಶದ ಅತ್ಯುನ್ನತ ನ್ಯಾಯ ಸಂಸ್ಥೆಯನ್ನು ತೊಂದರೆಗೀಡು ಮಾಡುವುದರೊಡನೆ ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಲಿದೆ ಎಂದು ಹೇಳಿದ್ದರು,
"ಸಿಜೆಐ 'ನ್ಯಾಯಾಂಗದ ಮುಖ್ಯಸ್ಥ', ನಿಸ್ಸಂದೇಹವಾಗಿ, ಸಿಜೆಐ ಈ ಅಧಿಕಾರವನ್ನು ಹೊಂದಿದ್ದು, ಸಿಜೆಐಗೆ ನ್ಯಾಯಪೀಠಗಳನ್ನು ರಚಿಸುವ ಅಧಿಕಾರವಿದೆ. ಆದರೆ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಪ್ರತಿಯೊಂದು ಅಧಿಕಾರವೂ ಕೆಲವು ಜವಾಬ್ದಾರಿಗಳೊಂದಿಗೆ ಸೇರಿಕೊಳ್ಳುತ್ತದೆ ದಾರ್ವಜನಿಕರ ಒಳಿತಿಗಾಗಿ ನಿಮಗೆ ಈ ಅಧಿಕಾರ ವಹಿಸಲಾಗಿದೆ. " ಚೆಲಮೇಶ್ವರ್ ಹೇಳಿದ್ದಾರೆ.
ಪೀಠಗಳ ಸ್ಥಾಪನೆ ಹಾಗು ಪ್ರಕರಣಗಳ ವಿತರಣೆಯನ್ನು ನ್ಯಾಯಯುತವಾಗಿ ಮಾಡಬೇಕಿದೆ ಎಂದ ಅವರು ಪತ್ರಕರ್ತ ಕರಣ್ ಥಾಪರ್ ಅವರ ಪ್ರಶ್ನೆಗೆ ಉತ್ತರಿಸುತ್ತಾ "ಇನ್ನೊಂದು ದಿನ ಯಾರಾದರೂ ನನ್ನ ಮೇಲೆಯೂ ದೋಷಾರೋಪಣೆಗೆ ಕೇಲಬಹುದು. ರಾಷ್ಟ್ರದಲ್ಲಿ ಈ ದೋಷಾರೋಪಣೆ ಬಗೆಗೆ ಏಕಿಷ್ಟು ಆತಂಕವಿದೆ ತಿಳಿಯುತ್ತಿಲ್ಲ. ವಾಸ್ತವವಾಗಿ ನಾವು ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರ ತೀರ್ಪಿನೊಂದರಲ್ಲಿ ವ್ಯವಸ್ಥೆಯನ್ನು ಕ್ರಮಗೊಳಿಸಲು ಅಗತ್ಯ ತಾಂತ್ರಿಕ ವ್ಯವಸ್ಥೆ ಬೇಕೆಂದು ಬರೆದಿದ್ದೇವೆ ಎಂದರು.
"ಎಲ್ಲಾ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ದೋಷಾರೋಪಣೆಯೊಂದೇ ಉತ್ತರವಾಗಬಾರದು ಕೆಲ ದಿನಗಳ ಹಿಂದೆ ಯಾರೋ ಒಬ್ಬರು ನನ್ನ ದೋಷಾರೋಪಣೆಗಾಗಿಯೂ ಬೇಡಿಕೆ ತಂದಿದ್ದರು. ನಾನು ನಿಮ್ಮ ಮಾತನ್ನು ಒಪ್ಪಿಕೊಳ್ಳಲಾರೆ ಆದರೆ ನಿಮಗಿರುವ ಪ್ರಶ್ನಿಸುವ ಹಕ್ಕನ್ನು ನಾನು ಗೌರವಿಸುತ್ತೇನೆ " ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ದೋಷಾರೋಪಣೆ ಸಲ್ಲಿಸುವಂತೆ ಪ್ರತಿಪಕ್ಷಗಳಿಂದ ಒತ್ತಾಯ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನಿಡಿದ್ದಾರೆ.
ಇದುವರೆಗೂ ಭಾರತದಲ್ಲಿ ಯಾವ ಮುಖ್ಯ ನ್ಯಾಯಮೂರ್ತಿಗಳೂ ದೋಷಾರೋಪಣೆಯನ್ನು ಎದುರಿಸಿಲ್ಲ.
ಮುಖ್ಯ ನ್ಯಾಯಮೂರ್ತಿಗಳಿಗೆ ನವೆಂಬರ್ 2017ರಲ್ಲಿ ಬರೆದ ಪತ್ರದ ಬಗೆಗೆ ನ್ಯಾಯಮೂರ್ತಿ ಗೊಗೊಯ್ ಆತಂಕಗೊಂಡಿರುವರೆ ಎನ್ನುವ ಪ್ರಶ್ನೆಗೆ ಸಹ ಚಲಮೇಶ್ವರ್ ತಾವು ಅಥವಾ ಗೊಗೊಯ್ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗುವುದಿಲ್ಲ ಎಂದು ಹೇಳಿದ್ದಲ್ಲದೆ ಹಾಗೇನಾದರೂ ಸಂಭವಿಸಿದ್ದಾದರೆ ತಾವು ಜನವರಿ 12 ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದುದುದು ಸತ್ಯವೆಂದಾಗುತ್ತದೆ ಎಂದರು.
"ನಾನು ಜ್ಯೋತಿಷಿ ಅಲ್ಲ, ನಾನು ಆ ಕುರಿತು ಚಿಂತಿಸಲಾರೆ. ನಾನು ಆಗುವುದಿಲ್ಲ ಎಂದೇ ಬಾವಿಸುವೆ. (ಜಸ್ಟಿಸ್ ಗೊಗೊಯ್ ಅವರು ಸಿಜೆಐ ಸ್ಥಾನವನ್ನು ನಿರಾಕರಿಸಿದ್ದರು)ಅದು ಸಂಭವಿಸಿದರೆ, ಪತ್ರಿಕಾಗೋಷ್ಠಿಯಲ್ಲಿ ನಾವು ಹೇಳಿದ ಮಾತು ನಿಜವೆಂದು ಸಾಬೀತಾಗಲಿದೆ" ನ್ಯಾಯಮೂರ್ತಿಗಳು ಹೇಳಿದ್ದಾರೆ.