ಲಖನೌ: ಜೆಟ್ ಏರ್ವೇಸ್ ವಿಮಾನ ತುರ್ತು ಭೂಸ್ಪರ್ಷ
ಲಖನೌ(ಉತ್ತರ ಪ್ರದೇಶ): 71 ಪ್ರಯಾಣಿಕರಿದ್ದ ದೆಹಲಿ ಜೆಟ್ ಏರ್ವೇಸ್ ವಿಮಾನವೊಂದು ಲಖನೌ ನ ಅಮೋಸಿ ವಿಮಾನ ನಿಲ್ದಾನಾದಲ್ಲಿ ತುರ್ತು ಭೂಸ್ಪರ್ಷ ಮಾಡಿದೆ.
ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಷ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ವಿಮಾನ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ನಾವು ಯಾವ ತುರ್ತು ಪರಿಸ್ಥಿತಿಯನ್ನೂ ನಿಭಾಯಿಸಲು ಸಿದ್ದರಿದ್ದೇವೆ ಎಂದುವಿಮಾನ ನಿಲ್ದಾಣದ ನಿರ್ದೇಶಕ ಎ.ಕೆ.ಶರ್ಮಾ ಹೇಳಿದ್ದಾರೆ.
ಘಟನೆಯ ಬಳಿಕ ವಿಮಾನವು 26 ಪ್ರಯಾಣಿಕರನ್ನು ದೆಹಲಿಗೆ ಕರೆದೊಯ್ದಿದೆ ಎಂದು ಶರ್ಮಾ ಹೇಳಿದ್ದಾರೆ.
ಆಹಾರದ ಟ್ರಕ್ ಗೆ ವಿಮಾನ ಢಿಕ್ಕಿ
ಜೆಟ್ ಏರ್ವೇಸ್ ವಿಮಾನವೊಂದು ಆಹಾರ ಸಾಗಣೆ ಟ್ರಕ್ ಗೆ ಢಿಕ್ಕಿಯಾದ ಘಟನೆ ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನದ ರೆಕ್ಕೆಯು ರನ್ ವೇ ಬಳಿಯಿದ್ದ ತಾಜ್ ಸ್ಟಾರ್ ಆಹಾರ ಟ್ರಕ್ ನ ಅಡಿಯಲ್ಲಿ ಸಿಲುಕಿದೆ.
ಘಟನೆಯ ಕಾರಣ ಯಾವ ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆಂದು ಎ ಎನ್ ಐ ವರದಿ ಮಾಡಿದೆ.