ದೇಶ

ಉಪವಾಸ ಸತ್ಯಾಗ್ರಹ: ರಾಜ್ ಘಾಟ್ ನಿಂದ ಹೊರಹೋಗುವಂತೆ ಟೈಟ್ಲರ್ ಗೆ ಹೇಳಿದ 'ಕೈ' ನಾಯಕರು

Nagaraja AB

ನವದೆಹಲಿ : ಪ್ರಧಾನಿ ನರೇಂದ್ ರಮೋದಿ ಸರ್ಕಾರ ಹಾಗೂ ಸಂಸತ್ತಿನ ಬಜೆಟ್ ಅಧಿವೇಶನ ವ್ಯರ್ಥಗೊಂಡಿದ್ದನ್ನು ವಿರೋಧಿಸಿ ರಾಜ್ ಘಟ್ ಬಳಿ ಕಾಂಗ್ರೆಸ್  ಪಕ್ಷದ  ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.

ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವರಾದ ಅಜಯ್ ಮಾಕೆನ್,  ಕಮಲ್ ನಾಥ್, ಮುಖಂಡರಾದ ಪಿ. ಸಿ. ಚಾಕೊ, ರಣದೀಪ್ ಸುರ್ಜಿವಾಲ, ಶೀಲಾ ದೀಕ್ಷಿತ್ ಮತ್ತಿತರು ಪಾಲ್ಗೊಂಡಿದ್ದಾರೆ.

 1984 ರ ಸಿಖ್ ವಿರೋಧಿ ದಂಗೆಯ ಆರೋಪಿಗಳಾಗಿರುವ ಪಕ್ಷದ ಮುಖಂಡರಾದ ಸಜ್ಜನ್ ಕುಮಾರ್ ಮತ್ತು ಜಗದೀಶ್ ಟೈಟ್ಲರ್   ಪ್ರತಿಭಟನಾ ಸ್ಥಳದಲ್ಲಿ ಕೂರದಂತೆ ಹೇಳಲಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಕೂಡಲೇ ಕುಮಾರ್ ಆ ಸ್ಥಳದಿಂದ ಹೊರಬಂದಿರುವುದಾಗಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಬಿಜೆಪಿಯ ಕೆಲ ಪಿತೂರಿಗಳು ಎಲ್ಲಾವನ್ನು ಗಮನಿಸುತ್ತಿರುತ್ತಾರೆ ಎಂದು ರಣದೀಪ್ ಸುರ್ಜಿವಾಲ ಹೇಳಿದರು.  ಮಾಜಿ ಪ್ರಧಾನಿ ಇಂದಿರಾಗಾಂಧಿ 1984ರಲ್ಲಿ ತನ್ನ ಅಂಗರಕ್ಷಕರಿಂದಲೇ ಹತ್ಯೆಯಾದ ಬಳಿಕ ನಡೆದಿದ್ದ ಸಿಖ್ ವಿರೋಧಿ ದಂಗೆಯಲ್ಲಿ  ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಆರೋಪಿಗಳಾಗಿದ್ದಾರೆ.

ಸಿಬಿಎಸ್ ಸಿ ಪ್ರಶ್ನೆಪತ್ರಿಕೆ ಸೋರಿಕೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ, ಕಾವೇರಿ ನೀರು ವಿವಾದ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ , ಪರಿಶಿಷ್ಠ ಜಾತಿ ಮತ್ತು ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ  ಕುರಿತು ಸುಪ್ರೀಂಕೋರ್ಟ್ ತೀರ್ಪು ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.

SCROLL FOR NEXT