ಲಂಡನ್: ಸ್ಮಾರ್ಟ್ ಫೋನ್ ಗಳ ಬಳಕೆ ವ್ಯಾಪಕವಾಗುತ್ತಿದ್ದು, ಮಕ್ಕಳೂ ಸ್ಮಾರ್ಟ್ ಫೋನ್ ಬಳಕೆ ಮಾಡಲು ಪ್ರಾರಂಭಿಸಿದ್ದಾರೆ. ಹೊಸ ವಿಷಯ ಏನಪ್ಪಾ ಅಂದ್ರೆ 6 ವರ್ಷಗಳೊಳಗಿನ ಪ್ರತಿ 4 ಮಕ್ಕಳ ಪೈಕಿ ಒಂದು ಮಗುವಿನ ಕೈಲಿ ಸ್ಮಾರ್ಟ್ ಫೋನ್ ಇರುತ್ತದಂತೆ
ಬ್ರಿಟನ್ ಲ್ಲಿ ಈ ಕುರಿತು ಅಧ್ಯಯನ ನಡೆಸಲಾಗಿದ್ದು, ಮ್ಯೂಸಿಕ್ ಮ್ಯಾಗ್ಪಿ ಎಂಬ ಆನ್ ಲೈನ್ ಟ್ರೇಡ್ ಔಟ್ ಲೆಟ್ ನ ಸಂಶೋಧಕರು ಅಧ್ಯಯನ ನಡೆಸಿದ್ದು, 6 ವರ್ಷಗಳನ್ನು ಪೂರೈಸಿದ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸ್ಮಾರ್ಟ್ ಫೋನ್ ಗಳನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೇ ದಿನದ 24 ಗಂಟೆಗಳಲ್ಲಿ 21 ಗಂಟೆಗಳು ಸ್ಮಾರ್ಟ್ ಫೋನ್ ನೊಂದಿಗೇ ಕಾಲ ಕಳೆಯುತ್ತಾರೆ ಎಂದು ತಿಳಿದುಬಂದಿದೆ.
ಇನ್ನು 10 ಜನ ಪೋಷಕರ ಪೈಕಿ 8 ಜನರು ತಮ್ಮ ಮಕ್ಕಳು ಸ್ಮಾರ್ಟ್ ಫೋನ್ ಬಳಕೆ ಮಾಡುವ ಸಮಯವನ್ನು ನಿಯಂತ್ರಿಸುವುದಿಲ್ಲ ಎಂದೂ ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ.