ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲೋಕಪಾಲ್ ಆಯ್ಕೆ ಪ್ರಕ್ರಿಯೆಯಿಂದ ವಿರೋಧ ಪಕ್ಷವನ್ನು ಹೊರಗಿಡಲು ಬಯಸಿದೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಲೋಕಪಾಲ್ ಆಯ್ಕೆ ಸಮಿತಿ ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಲು ಸರ್ಕಾರ ನೀಡಿದ್ದ ಆಹ್ವಾನಕ್ಕೆ ಪ್ರತಿಯಾಗಿ ಅವರು ಪ್ರಧಾನ ಮಂತ್ರಿ ಮೋದಿಗೆ ಬರೆದ ಪತ್ರದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.
"ಲೋಕಪಾಲ್ ಆಯ್ಕೆ ಪ್ರಕ್ರಿಯೆಯಿಂಡ ವಿರೋಧ ಪಕ್ಷವನ್ನು ಹೊರಗಿಡಲು ಕೇಂದ್ರ ಸರ್ಕಾರ ಬಯಸಿದೆ. ಏಕೈಕ ದೊಡ್ಡ ವಿರೋಧ ಪಕ್ಷದ ನಾಯಕರನ್ನು ವಿಶೇಷ ಆಹ್ವಾನಿತರನ್ನಾಗಿ ಆಗಮಿಸಬೇಕೆಂದು ಹೇಳಿರುವುದರ ಹಿಂದೆ ಇದೇ ಉದ್ದೇಶವಿದೆ. ವಿಶೇಷ ಆಹ್ವಾನಿತರಿಗೆ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆಯಲ್ಲಿ ಯಾವ ಅಧಿಕಾರಗಳಿಲ್ಲ ಎನ್ನುವುದನ್ನು ಸರ್ಕಾರ ಚೆನ್ನಾಗಿ ತಿಳಿದಿದೆ." ಖರ್ಗೆ ಪತ್ರದಲ್ಲಿ ಬರೆದಿದ್ದಾರೆ.
ಯಾವುದೇ ಹಕ್ಕುಗಳಿಲ್ಲದ ವಿಶೇಷ ಆಹ್ವಾನಿತರ ಸ್ಥಾನದಲ್ಲಿ ನಮ್ಮನ್ನು ಕುಳ್ಳಿರಿಸುವ ಮೂಲಕ ವಿರೋಧ ಪಕ್ಷಗಳ ಭಾಗವಹಿಸುವಿಕೆ ಮತ್ತು ಪ್ರಾಮಾಣಿಕವಾಗಿ ಅಭಿಪ್ರಾಯ ಹಂಚಿಕೊಳ್ಳುವುದಕ್ಕೆ ಇದರಿಂದ ಸಾಧ್ಯವಾಗುವುದಿಲ್ಲ.ಇದು ರಾಷ್ಟ್ರದ ಜನತೆಯನ್ನು ತಪ್ಪುದಾರಿಗೆಳೆಯುವ ಕ್ರಮ. ಎಂದು ಅವರು ದೂರಿದ್ದಾರೆ.
ಮಾರ್ಚ್ ನಲ್ಲಿ ಈ ಆಮಂತ್ರಣವನ್ನು ಸ್ವೀಕರಿಸಿದ್ದ ಖರ್ಗೆ ರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಅತೀವವಾಗಿ ನಿರಾಶೆಗೊಂಡಿದ್ದಾಗಿ ತಿಳಿಸಿದ್ದಾರೆ.
"ಲೋಕಪಾಲ್ ಕಾಯ್ದೆಯ ಉದ್ದೇಶವನ್ನೇ ಮುರುಟಿಸಲು ನಿಮ್ಮ ಸರ್ಕಾರ ಹೊರಟಿರುವಾಗ ನನ್ನ ಸಂವಿಧಾನದ ಕರ್ತವ್ಯವನ್ನು ನಾನು ನಿರ್ಲಕ್ಷಿಸಲಿದ್ದೇನೆ, ನಾನು ಈ ಸಭೆಯಲ್ಲಿಭಾಗವಹಿಸುವುದಿಲ್ಲ" ಎಂದು ಖರ್ಗೆ ಪ್ರಧಾನಿಗೆ ತಿಳಿಸಿದರು.
ಲೋಕಸಭೆಯ ಅತಿ ದೊಡ್ಡ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಸಮಿತಿಗೆ ಸೇರಿಸಿಕೊಳ್ಳದೆ ಲೋಕಪಾಲ್ ಕಾಯಿದೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರದೆಯೆ ಕೇಂದ್ರ ಸರ್ಕಾರ 4 ವರ್ಷಗಳ ಸಮಯವನ್ನು ವ್ಯರ್ಥಗೊಳಿಸಿದೆ. ಭ್ರಷ್ಠಾಚಾರವನ್ನು ನಿರ್ಮೂಲನೆ ಮಾಡಲು ಮೋದಿ ಸರ್ಕಾರವು ಆಸಕ್ತಿ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics