ದೇಶ

ಉತ್ತರ ಪ್ರದೇಶ: ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ವಿರುದ್ಧ ಎಸ್ಐಟಿ ತನಿಖೆ

Sumana Upadhyaya

ಲಕ್ನೊ: ಉನ್ನಾವೊನಲ್ಲಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಮತ್ತು ಅವರ ಸೋದರ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಮತ್ತು ಆಕೆಯ ತಂದೆಯ ಕಸ್ಟಡಿಯಲ್ಲಿನ ಸಾವಿನ ಆರೋಪಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡವನ್ನು(ಸಿಟ್) ರಚಿಸಲಾಗಿದೆ.

ಘಟನೆಗೆ ಸಂಬಂಧಪಟ್ಟಂತೆ ಇಡೀ ಪ್ರಕರಣದ ತನಿಖೆಯನ್ನು ಸಿಟ್ ನಡೆಸಲಿದೆ ಎಂದು ಕಾನೂನು ಮತ್ತು ಆದೇಶ ಸಹಾಯಕ ಮಹಾ ನಿರ್ದೇಶಕ ಆನಂದ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಶಾಸಕರ ಆರೋಪಿ ಸೋದರ ಅತುಲ್ ಸಿಂಗ್ ನನ್ನು ಉನ್ನಾವೊದಲ್ಲಿ ಬಂಧಿಸಲಾಗಿದೆ.

ಈ ಆರೋಪವನ್ನು ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ನಿರಾಕರಿಸಿದ್ದು ಪ್ರತಿಪಕ್ಷಗಳ ಪಿತೂರಿಯಿದು ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ ಯಾರಿಗೂ ಕ್ಲೀನ್ ಚಿಟ್ ನೀಡಿಲ್ಲ ಎಂದು ಎಡಿಜಿ ತಿಳಿಸಿದ್ದಾರೆ.

ಯುವತಿಯ ತಂದೆ ನಿನ್ನೆ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ. ಪೊಲೀಸರ ಆಜ್ಞಾಪನೆಯಿಂದ ಯುವತಿಯ ತಂದೆಯನ್ನು ಕಸ್ಟಡಿಯಲ್ಲಿ ಸಾಯಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

SCROLL FOR NEXT