ಜನರಲ್ ಬಿಪಿನ್ ರಾವತ್ 
ದೇಶ

ಆಧುನಿಕ ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುವತ್ತ ಇಂಜಿನಿಯರ್ ಗಳು ಆಸಕ್ತಿ ತಾಳಬೇಕು: ಬಿಪಿನ್ ರಾವತ್

ಭವಿಷ್ಯದ ಯುದ್ಧಗಳಿಗೆ ಸ್ಥಳೀಯವಾಗಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವತ್ತ ಗಮ ನೀಡಬೇಕು. ಆ ನಿಟ್ಟಿನಲ್ಲಿ ಇಂಜಿನಿಯರ್ ಗಳು ಭಾರತೀಯ ಸೇನೆಗೆ ಇರುವ ಅಂತರವನ್ನು ತುಂಬಬೇಕಿದೆ..........

ಚೆನ್ನೈ: ಭವಿಷ್ಯದ ಯುದ್ಧಗಳಿಗೆ ಸ್ಥಳೀಯವಾಗಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವತ್ತ ಗಮ ನೀಡಬೇಕು. ಆ ನಿಟ್ಟಿನಲ್ಲಿ ಇಂಜಿನಿಯರ್ ಗಳು ಭಾರತೀಯ ಸೇನೆಗೆ ಇರುವ ಅಂತರವನ್ನು ತುಂಬಬೇಕಿದೆ ಎಂದು ಬಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್ಪೋ 2018 ಸೆಮಿನಾರ್ ನಲ್ಲಿ ಮಾತನಾಡಿದ ರಾವತ್ ಇಂಜಿನಿಯರ್ ಗಳು, ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು ಸೇನೆಯ ಈ ಕೊರತೆಯನ್ನು ತುಂಬಬೇಕಿದೆ."ನಮ್ಮ ಸೈನಿಕರು ಧೈರ್ಯಶಾಲಿಯಾಗಿದ್ದಾರೆ ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನು ನೀಡಲು ಸಿದ್ದರಿದ್ದಾರೆ. ಆದರೆ ಹಾಗೆಂದ ಮಾತ್ರಕ್ಕೆ ಅವರು ತಮ್ಮ ಜೀವದ ಬಗ್ಗೆ ಆಸೆ ಹೊಂದಿಲ್ಲವೆಂದು ಅರ್ಥವಲ್ಲ" ರಾವತ್ ಹೇಳಿದರು.
"ದಾಳಿಯ ವೇಳೆ ಅವರಿಗೆ ಸಹಕಾರಿಯಾಗಲು ಉತ್ತಮ  ಗುಣಮಟ್ಟದ ಕಣ್ಗಾವಲು ಸಾಧನಗಳನ್ನು, ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿಗಳನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದರಿಂದಾಗಿ ನಮ್ಮ ಸೈನಿಕರು ಶತ್ರುಗಳನ್ನು ಅವರು ದಾಳಿ ನಡೆಸುವುದಕ್ಕೆ ಮುನ್ನವೇ ಪತ್ತೆ ಮಾಡಿ ಅವರ ವಿರುದ್ಧ ಕಾರ್ಯಾಚರಿಸಲು ಸಮರ್ಥರಾಗಲಿದ್ದಾರೆ.
"ಸೇನಾ ಪಡೆಗಳು ಈ ಶಸ್ತ್ರಾಸ್ತ್ರಗಳಿಂದ ಪ್ರಯೋಜನ ಹೊಂದಲಿದೆ. ಏಕೆಂದರೆ ವ್ಯವಸ್ಥೆಗೆ ಅನುಗುಣವಾಗಿ ಬಳಸಲು ಅನುಕೂಲವಾಗುವಂತೆ ಅವುಗಳು ವಿನ್ಯಾಸಗೊಂಡಿರುತ್ತದೆ" ಅವರು ಹೇಳಿದ್ದಾರೆ.
"ನಮ್ಮಲ್ಲಿ ಪ್ರತಿಭೆ ಹಾಗೂ ನವೀನತೆಗೆ ಎಂದಿಗೂ ಕೊರತೆ ಇಲ್ಲ, ಆದರೆ ಉತ್ತಮ ಹೊಂದಾಣಿಕೆ ಅಗತ್ಯವಿದೆ ಸೇನಾ ಪಡೆಗಳ ಅಗತ್ಯತೆಗಳನ್ನು ಪೂರೈಸಲು ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು ಒಗ್ಗೂಡಬೇಕು" ಸೇನಾ ಮುಖ್ಯಸ್ಥರು ಆಶಯ ವ್ಯಕ್ತಪಡಿಸಿದ್ದಾರೆ..
"ಯುದ್ಧಭೂಮಿಯ ಅಗತ್ಯತೆಗೆ ವಿನ್ಯಾಸದ ಪರಿಹಾರಗಳು ('Designing Solutions to battlefield necessity') ಎನ್ನುವ ವಿಚಾರಪೂರ್ಣ ಸೆಮಿನಾರ್ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಎಲ್ಲರ ಹುಬ್ಬೇರುವಂತೆ ಮಾಡಿದ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT