ಸುಪ್ರೀಂ ಕೋರ್ಟ್ 
ದೇಶ

ಭಾರತದ ಮುಖ್ಯ ನ್ಯಾಯಮೂರ್ತಿಗಳೇ ಮೊದಲು, ಕೇಸ್ ಗಳ ಹಂಚಿಕೆಯನ್ನು ಅವರೇ ನಿರ್ಧರಿಸುತ್ತಾರೆ: ಸುಪ್ರೀಂ

ಮುಖ್ಯ ನ್ಯಾಯಾಧೀಶರು ಹುದ್ದೆಯಲ್ಲಿ ಮೊದಲಿಗರಾಗಿದ್ದು, ಪ್ರಕರಣಗಳ ಹಂಚಿಕೆ ಮತ್ತು ಅವುಗಳ ವಿಚಾರಣೆಗೆ ನ್ಯಾಯಪೀಠಗಳ ಸ್ಥಾಪನೆ...

ನವದೆಹಲಿ: ಮುಖ್ಯ ನ್ಯಾಯಾಧೀಶರು ಹುದ್ದೆಯಲ್ಲಿ ಮೊದಲಿಗರಾಗಿದ್ದು, ಪ್ರಕರಣಗಳ ಹಂಚಿಕೆ ಮತ್ತು ಅವುಗಳ ವಿಚಾರಣೆಗೆ ನ್ಯಾಯಪೀಠಗಳ ಸ್ಥಾಪನೆ ಕುರಿತು ನಿರ್ಧರಿಸುವ ಸಾಂವಿಧಾನಿಕ ಅಧಿಕಾರವನ್ನು ಅವರು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ತರ್ಕಬದ್ಧ ಮತ್ತು ಪಾರದರ್ಶಕವಾಗಿ ಕೇಸುಗಳನ್ನು ಹಂಚಿಕೆ ಮಾಡಿ ಅವುಗಳ ವಿಚಾರಣೆಗೆ ನ್ಯಾಯಪೀಠಗಳನ್ನು ರಚಿಸಲು ಮಾರ್ಗಸೂಚಿ ಚೌಕಟ್ಟುಗಳನ್ನು ರಚಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

ನ್ಯಾಯಪೀಠ  ಸ್ಥಾಪನೆ ಕುರಿತು ಆದೇಶ ಪ್ರಕಟಿಸಿದ ನ್ಯಾಯಮೂರ್ತಿ ಚಂದ್ರಚೂಡ್, ಸಾಂವಿಧಾನಿಕ ಯೋಜನೆಗಳಿಗೆ ಉಲ್ಲೇಖಿಸಿ ಹುದ್ದೆಯ ವಿಚಾರ ಬಂದಾಗ ಭಾರತದ ಮುಖ್ಯ ನ್ಯಾಯಮೂರ್ತಿಗಳು ಮೊದಲಿಗರಾಗಿದ್ದು, ಕೇಸುಗಳ ಹಂಚಿಕೆ ಮತ್ತು ನ್ಯಾಯಪೀಠಗಳ ಸ್ಥಾಪನೆ ಮಾಡುವ ಅಧಿಕಾರ ಹೊಂದಿರುತ್ತಾರೆ ಎಂದು ಹೇಳಿದ್ದಾರೆ.

ದೇಶದ ಸಂವಿಧಾನದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಹುದ್ದೆ ಅತ್ಯುನ್ನತವಾಗಿರುವುದರಿಂದ ಅವರು ನೀಡುವ ಜವಾಬ್ದಾರಿಗಳ ಬಗ್ಗೆ ಯಾವುದೇ ಅಪನಂಬಿಕೆಗಳಿರುವುದಿಲ್ಲ.ಸಂವಿಧಾನದಡಿಯಲ್ಲಿ ಅಗತ್ಯಪಟ್ಟ ಕೆಲಸಗಳನ್ನು ಸುಪ್ರೀಂ ಕೋರ್ಟ್ ವಹಿಸುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಾಧೀಶರಾದ ಜೆ.ಚೆಲಮೇಶ್ವರ್,ರಂಜನ್ ಗೊಗೊಯ್, ಮದನ್ ಬಿ ಲೊಕುರ್ ಮತ್ತು ಕುರಿಯನ್ ಜೋಸೆಫ್ ಕಳೆದ ಜನವರಿ 12ರಂದು ಸುದ್ದಿಗೋಷ್ಠಿ ನಡೆಸಿ, ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳ ವಿಚಾರಣೆಯನ್ನು ಸರಿಯಾಗಿ ಕೆಳ ನ್ಯಾಯಾಲಯಗಳಿಗೆ ಹಂಚಿಕೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಪ್ರಕರಣಗಳ ವಿಚಾರಣೆ ಹಂಚಿಕೆ ಮತ್ತು ನ್ಯಾಯಪೀಠಗಳ ಸ್ಥಾಪನೆಯಲ್ಲಿ ಎಲ್ಲಾ ಹೈಕೋರ್ಟ್ ಗಳು ಮತ್ತು ಸುಪ್ರೀಂ ಕೋರ್ಟ್ ಗೆ ಮಾರ್ಗಸೂಚಿ ನೀಡಬೇಕೆಂದು ಕೋರಿ ಅಶೋಕ್ ಪಾಂಡೆ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!