ಅಸ್ಸಾಂ: ಗಡಿ ಅತಿಕ್ರಮಣದ ಬಗ್ಗೆ ಶೂನ್ಯ ಸಹನೆ ತೋರಲು ಬಿಎಸ್ಎಫ್ ಕೈಗೊಂಡಿದ್ದ ಕ್ರಮ ಈಗ ಬಾಂಗ್ಲಾ ಗಡಿಯಲ್ಲಿ ನನಸಾಗಿದೆ.
ಏ.11 ರಂದು ಅಸ್ಸಾಂ-ಬಾಂಗ್ಲಾದೇಶ ಗಡಿಯಲ್ಲಿ ಭಾರತದ ಮೊದಲ ಸ್ಮಾರ್ಟ್ ಬೇಲಿ ಕಾರ್ಯಾರಂಭ ಮಾಡಿದೆ.
ಗಡಿ ಪ್ರದೇಶಗಳಲ್ಲಿ ಗ್ರಿಡ್ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರುವುದರಿಂದ ಗಡಿಯೊಳಗೆ ನುಸುಳುವಿಕೆ ಕಂಡುಬಂದಲ್ಲಿ ತಕ್ಷಣವೇ, ಗ್ರಿಡ್ ಎಚ್ಚರಿಕೆ ನೀಡಲಿದ್ದು ಉಳಿದ ಗ್ರಿಡ್ ಗಳಿಗೂ ಮಾಹಿತಿ ರವಾನೆ ಮಾಡಲಿದೆ. ಭದ್ರತಾ ದೃಷ್ಟಿಯಿಂದ ಬಿಎಸ್ಎಫ್ ಸ್ಮಾರ್ಟ್ ಬೇಲಿಗೆ ಸಂಬಂಧಿಸಿದ ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಬಹಿಂಗಪಡಿಸಲು ನಿರಾಕರಿಸಿದೆ.
ಇದೇ ಮಾದರಿಯ ತಂತ್ರಜ್ಞಾನವನ್ನು ಬಾಂಗ್ಲಾದೇಶದೊಂದಿಗೆ ಇರುವ ಭಾರತದ ಇತರ ಗಡಿಗಳಿಗೂ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದ್ದು, ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದೊಂದಿಗಿನ ಗಡಿಗಳಲ್ಲಿಯೂ ಶೀಘ್ರವೇ ಈ ತಂತ್ರಜ್ಞಾನದ ಬೇಲಿಗಳು ಕಾರ್ಯನಿರ್ವಹಣೆ ಮಾಡಲಿವೆ ಎಂದು ಹೇಳಾಗುತ್ತಿದೆ.