ನವದೆಹಲಿ: ಯುವತಿಯ ಅನುಮತಿ ಪಡೆಯದೇ ಆಕೆಯ ಮದುವೆ ಮಾಡಲಾಗಿರುವ ಘಟನೆ ನಡೆದಿದ್ದು, ಕರ್ನಾಟಕದ ಯುವತಿಗೆ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಕರ್ನಾಟಕದ ಯುವತಿ ದೆಹಲಿಯಲ್ಲಿ ವಾಸವಾಗಿದ್ದು, ಸಂತ್ರಸ್ತ ಯುವತಿಗೆ ದೆಹಲಿ ಮಹಿಳಾ ಆಯೋಗ ನೆರವು ನೀಡುತ್ತಿದೆ.
ಹಿಂದೂ ವಿವಾಹ ಕಾಯ್ದೆಯ ಪ್ರಕಾರ ವಿವಾಹವಾಗಬೇಕಿರುವ ಯುವಕ ಹಾಗೂ ಯುವತಿಯ ಸಂಪೂರ್ಣ ಒಪ್ಪಿಗೆ ನಂತರವಷ್ಟೇ ಆ ವಿವಾಹ ಕಾನೂನು ಮಾನ್ಯವಾಗುತ್ತದೆ. ಆದರೆ ಕರ್ನಾಟಕದ ಯುವತಿ ತನ್ನ ಒಪ್ಪಿಗೆ ಇಲ್ಲದೇ ವಿವಾಹ ನಡೆಸಲಾಗಿದೆ.
ಒತ್ತಾಯ ಪೂರ್ವಕವಾಗಿ ಮದುವೆ ಮಾಡುವುದು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 12 ಸಿ ಪ್ರಕಾರ ವಿವಾಹ ರದ್ದಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ ನ್ಯಾ. ದೀಪಕ್ ಮಿಶ್ರಾ, ಎಎಂ ಕನ್ವಲಿಕರ್ ಹಾಗೂ ದೀಪಕ್ ಮಿಶ್ರಾ ಅವರಿದ್ದ ಪೀಠ ಹೇಳಿದ್ದು, ಯುವತಿ ಹಾಗೂ ಆಕೆಯ ಪೋಷಕರ ಬಗ್ಗೆ ಯಾವುದೇ ಮಾಹಿತಿಯನ್ನೂ ಬಹಿರಂಗಗೊಳಿಸದೇ ಇರುವ ಮನವಿಗೆ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಲು ಸೂಚನೆ ನೀಡಿರುವ ಕೋರ್ಟ್ ಮೇ.5 ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.