ದೇಶ

ಮುಖ್ಯ ನ್ಯಾಯಮೂರ್ತಿಗಳ ಅಧಿಕಾರ ಪ್ರಶ್ನಿಸಿದ ಪಿಐಎಲ್ ವಿಚಾರಣೆ ನಡೆಸಲು ನ್ಯಾ.ಚಲಮೇಶ್ವರ್ ನಕಾರ

Srinivas Rao BV
ನವದೆಹಲಿ: ಪ್ರಕರಣಗಳ ಹಂಚಿಕೆಗಾಗಿ ಮಾರ್ಗಸೂಚಿಯನ್ನು ರಚಿಸುವುದಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಕಾನೂನು ಸಚಿವ ಶಾಂತಿ ಭೂಷಣ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಚಲಮೇಶ್ವರ್ ನಿರಾಕರಿಸಿದ್ದಾರೆ. 
ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿರುವ ಚಲಮೇಶ್ವರ್, ಶಾಂತಿ ಭೂಷಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿದ್ದಾರೆ. ಇನ್ನು ಮತ್ತೊಂದು ಬೆಳವಣಿಗೆಯಲ್ಲಿ ತಮ್ಮ ತಂದೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತ್ವರಿತವಾಗಿ ವಿಚಾರಾಣೆ ಮಾಡಬೇಕೆಂದು ಪ್ರಶಾಂತ್ ಭೂಷಣ್ ಮನವಿ ಸಲ್ಲಿಸಿದ್ದು,  ಪರಾಮರ್ಶಿಸಿಸುವುದಾಗಿ ಸಿಜೆಐ ತಿಳಿಸಿದ್ದಾರೆ. 
ಇದಕ್ಕೂ ಮುನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ.ಚಲಮೇಶ್ವರ್ ಪೀಠದ ಎದುರು ಸಲ್ಲಿಸಿದ್ದರು. ಆದರೆ ನ್ಯಾ.ಚಲಮೇಶ್ವರ್ ಅವರು ಅರ್ಜಿ ವಿಚಾರಣೆಗೆ ನಿರಾಕರಿಸಿದ್ದಾರೆ. ಸುಪ್ರೀಂ ಕೋರ್ಟ್ ನ ನ್ಯಾ. ಕುರಿಯನ್ ಜೋಸೆಫ್ ಹಾಗೂ ಚಲಮೇಶ್ವರ್ ಅವರು ನ್ಯಾಯಾಂಗದಲ್ಲಿ ಕಾರ್ಯಾಂಗ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಮುಖ್ಯ ನ್ಯಾಯಮೂರ್ತಿಗಳ ಅಧಿಕಾರವನ್ನು ಪ್ರಶ್ನಿಸಿದ ಪಿಐಎಲ್ ವಿಚಾರಣೆ ನಡೆಸಲು ನ್ಯಾ.ಚಲಮೇಶ್ವರ್ ನಿರಾಕರಿಸಿದ್ದು, ನನ್ನ ವಿರುದ್ಧ ನಿರಂತರ ಟೀಕೆ ವ್ಯಕ್ತವಾಗುತ್ತಿದೆ. ನನ್ನ ಕಷ್ಟವನ್ನು ಅರ್ಥಮಾಡಿಕೊಳ್ಳಿ ಎಂದು ಭೂಷಣ್ ಗೆ ಚಲಮೇಶ್ವರ್ ಹೇಳಿದ್ದಾರೆ. 
SCROLL FOR NEXT