ದೇಶ

ಮೂರು ವರ್ಷದಲ್ಲಿ ಚಹಾ ತಿಂಡಿಗಾಗಿ ಕೇಜ್ರಿವಾಲ್ ಕಛೇರಿ ಮಾಡಿದ ಖರ್ಚೆಷ್ಟು ಗೊತ್ತಾ?

Raghavendra Adiga
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಛೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಟೀ, ಬಿಸ್ಕೇಟ್ ಗಳಿಗಾಗಿ ಖರ್ಚಾದದ್ದು 1.03 ಕೋಟಿ ರೂ! 
ಹೌದು, ಇದು ನಿಜ. ಆಮ್‌ ಆದ್ಮಿ ಪಕ್ಷ ಸಹ ಖರ್ಚು ಮಾಡುವುದರಲ್ಲಿ ಯಾವುದೇ ಇತರೆ ರಾಜಕೀಯ ಪಕ್ಷಗಳಿಗಿಂತ ಕಡಿಮೆ ಇಲ್ಲ. ಕೇಜ್ರಿವಾಲ್ ಕಛೇರಿಯಲ್ಲಿ ಚಹಾ ಹಾಗೂ ತಿಂಡಿಗಾಗಿ ಬರೋಬ್ಬರಿ  1.03 ಕೋಟಿ ರೂ ಖರ್ಚು ಮಾಡಲಾಗಿದೆ ಎಂದು  ಮಾಹಿತಿ ಹಕ್ಕು ಕಾಯ್ದೆಯ ಅಡಿ ಸಲ್ಲಿಸಿದ ಅರ್ಜಿಯಿಂದ ಬಯಲಾಗಿದೆ.
ಹಲ್ದವಾನಿ ಮೂಲದ ಆರ್‌ಟಿಐ ಕಾರ್ಯಕರ್ತ ಹೇಮಂತ್‌ ಸಿಂಗ್‌ ಗೌನಿಯಾ ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಸಲ್ಲಿಸಿ ಮಾಹಿತಿ ಪಡೆದಿದ್ದಾರೆ.
ಚಹಾ, ತಿಂಡಿಗಾಗಿ 015-2016 ಅವಧಿಯಲ್ಲಿ 23.12 ಲಕ್ಷ ರೂ, 2016-17ರಲ್ಲಿ  46.54 ಲಕ್ಷ ರೂ. 2017-18 ರಲ್ಲಿ 33.36 ಲಕ್ಷ ರೂ. ಖರ್ಚಾಗಿದೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಇದರಲ್ಲಿ ಮುಖ್ಯಮಂತ್ರಿ ಅಧಿಕೃತ ಕಚೇರಿಗಾಗಿ 47.29 ಲಕ್ಷ ರೂ. ಗೃಹ ಕಚೇರಿಗಾಗಿ 24.86 ಲಕ್ಷ ರೂ. ವ್ಯಯವಾಗಿದೆ.
ಅರವಿಂದ ಕೇಜ್ರಿವಾಲ್ ಚಹಾ-ತಿಂಡಿಗಾಗಿ ಅತಿಯಾಗಿ ಹಣ ಖರ್ಚು ಮಾಡುತ್ತಿದ್ದಾರೆ. ಇದೇ ಹಣವನ್ನು ಸಾರ್ವಜನಿಕ ಕಾರ್ಯಗಳಿಗಾಗಿ ಸರ್ಕಾರ ವ್ಯಯಿಸಬಹುದಾಗಿದೆ. ಭವಿಷ್ಯದಲ್ಲಿ ಕೇಜ್ರಿವಾಲ್ ಈ ವೆಚ್ಚವನ್ನು ತಗ್ಗಿಸಲಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಆರ್‌ಟಿಐ ಕಾರ್ಯಕರ್ತ ಹೇಮಂತ್ ಹೇಳಿದರು.
SCROLL FOR NEXT