ದೇಶ

ಕತುವಾ, ಉನ್ನಾವೋ ಅತ್ಯಾಚಾರ ಪ್ರಕರಣಗಳಿಗೆ ವಿಪಕ್ಷಗಳು ಜಾತಿಯ ಬಣ್ಣ ನೀಡುತ್ತಿವೆ: ಬಿಜೆಪಿ

Manjula VN
ನವದೆಹಲಿ: ಕತುವಾ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಿಗೆ ವಿರೋಧ ಪಕ್ಷಗಳು  ಜಾತಿಯ ಬಣ್ಣ ನೀಡುತ್ತಿವೆ ಎಂದು ಬಿಜೆಪಿ ಶುಕ್ರವಾರ ಹೇಳಿದೆ. 
ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿಯವರು ಮಾತನಾಡಿ, ಪ್ರಕರಣಗಳ ಸಂಬಂಧ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಬಾರದಿದತ್ತು. ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದು, ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಬಾರದಿತ್ತು ಎಂದು ಹೇಳಿದ್ದಾರೆ. 
ಬಳಿಕ ಮಧ್ಯರಾತ್ರಿ ಕಾಂಗ್ರೆಸ್ ನಡೆಸಿದ್ದ ಕ್ಯಾಂಡಲ್ ಲೈಟ್ ಮಾರ್ಚ್ ಕುರಿತಂತೆ ಮಾತನಾಡಿದ ಅವರು, 1984 ಗಲಭೆ ಸಂದರ್ಭದಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯ ಎಸಲಾಗಿತ್ತು. ಆದರೆ, ಅಂದು ಏಕೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿಲ್ಲ. ಪಿಕ್ ಆ್ಯಂಡ್ ಚೂಸ್ ನೀತಿಯನ್ನು ಕಾಂಗ್ರೆಸ್ ಮೊದಲು ನಿಲ್ಲಿಸಬೇಕು. ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. 
ಅವರ ತಂತ್ರ ಹಾಗೂ ಯೋಜನೆಗಳನ್ನು ನೀವು ನೋಡಬಹುದು. ಮೊದಲು ಅಲ್ಪಸಂಖ್ಯಾತರು ಅಲ್ಪಸಂಖ್ಯಾತರು ಎಂದು ಹೇಳುತ್ತಿದ್ದರು. ನಂತರ ದಲಿತರು ದಲಿತರು ಎಂದು ಹೇಳಲು ಆರಂಭಿಸಿದ್ದರು. ಇದೀಗ ಮಹಿಳೆ ಮಹಿಳೆ ಎಂದು ಹೇಳುತ್ತಿದ್ದಾರೆ. ರಾಜ್ಯದ ವಿಚಾರಗಳಿಗೆ ಕೇಂದ್ರವನ್ನು ದೂಷಿಸುತ್ತಾರೆ. ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳದೇ ಇರುವುದರಿಂದ ಈ ರೀತಿಯ ಘಟನೆಗಳು ಸಂಭವಿಸುತ್ತಿವೆ ಎಂದು ತಿಳಿಸಿದ್ದಾರೆ. 
ಉನ್ನಾವೋ ಘಟನೆ ನಡೆದಿರುವುದು 10 ತಿಂಗಳ ಹಿಂದೆ. ಘಟನೆ ಕುರಿತಂತೆ ಪೊಲೀಸರು ಹೇಳಿಕೆ ನೀಡಿದ್ದರು. ಆದರೆ, ಬಿಜೆಪಿ ನಾಯಕನ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಅತ್ಯಾಚಾರ ಸಂತ್ರಸ್ತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಬಿಜೆಪಿ ನಾಯಕನ ಹೆಸರನ್ನು ಹೇಳಿದ್ದರು. ಬಳಿಕ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. 
SCROLL FOR NEXT