ದೇಶ

ಬುಡಕಟ್ಟು ಮಹಿಳೆಗೆ ಸ್ವತಃ ಪಾದರಕ್ಷೆ ತೊಡಿಸಿದ ಪ್ರಧಾನಿ ಮೋದಿ: ವಿಡಿಯೋ ವೈರಲ್!

Srinivas Rao BV
ರಾಯ್ ಪುರ: ತಮ್ಮ ಸಿಬ್ಬಂದಿಗಳಿಂದ ಪಾದರಕ್ಷೆಗಳನ್ನು ತೊಡಿಸಿಕೊಳ್ಳುವ ಅಧಿಕಾರದಿಂದ ಮೆರೆಯುವ ರಾಜಕಾರಣಿಗಳನ್ನು ನಾವು ನೋಡಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ತದ್ವಿರುದ್ಧ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.  ನಾನು ಪ್ರಧಾನಿ ಅಲ್ಲ ಪ್ರಧಾನ ಸೇವಕ ಎನ್ನುವ ಮೋದಿ ಈಗೇನು ಮಾಡದ್ರಪ್ಪಾ ಅಂದ್ರೆ, ಚತ್ತೀಸ್ ಗಢದ ಬೈಲಾಸ್ ಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಚರಣ್-ಪಾದುಕಾ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ವೇಳೆ ಆದಿವಾಸಿ(ಬುಡಕಟ್ಟು) ಮಹಿಳೆಯೊಬ್ಬರಿಗೆ ಸ್ವತಃ ತಾವೇ ಪಾದರಕ್ಷೆ ತೊಡಿಸಿದ್ದಾರೆ. 
ಚತ್ತೀಸ್ ಗಢದಲ್ಲಿರುವ ಆದಿವಾಸಿ ಮಹಿಳೆಯರು ತೆಂಡು ಎಲೆ ಕೀಳುವುದಕ್ಕಾಗಿ ಕಾಡುಗಳಲ್ಲಿ ಓಡಾಡುತ್ತಾರೆ, ಆದರೆ ಹಲವು ಬಾರಿ ಅವರ ಬಳಿ ಪಾದರಕ್ಷೆ ಇರುವುದಿಲ್ಲ, ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಆದಿವಾಸಿ(ಬುಡಕಟ್ಟು)  ಮಹಿಳೆಯರಿಗೆ ಪಾದರಕ್ಷೆಗಳನ್ನು ನೀಡುವುದಕ್ಕಾಗಿ ಚರಣ್-ಪಾದಿಕಾ ಯೋಜನೆ ಜಾರಿಗೊಳಿಸಿದೆ. ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ ಸ್ವತಃ ಸ್ವತಃ ತಾವೇ ಪಾದರಕ್ಷೆ ತೊಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 
ಕಾರ್ಯಕ್ರಮದಲ್ಲಿ ಪಾದರಕ್ಷೆಗಳನ್ನು ಪಡೆದ ಮಹಿಳೆ ಸಂತಸ ವ್ಯಕ್ತಪಡಿಸಿದ್ದು, ಈ ವೇಳೆ ಚತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಸಹ ಭಾಗವಹಿಸಿದ್ದರು. 
SCROLL FOR NEXT